Monday, May 11, 2026
Home ತಾಜಾ ಸುದ್ದಿ ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಪುತ್ರ ಹಂಟರ್ ಗೆ 25 ವರ್ಷ ಜೈಲು ಶಿಕ್ಷೆ!

ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಪುತ್ರ ಹಂಟರ್ ಗೆ 25 ವರ್ಷ ಜೈಲು ಶಿಕ್ಷೆ!

by Vahini
0 comments

ಅಮೆರಿಕದ ಅಧ್ಯಕ್ಷ ಜೋ ಬಿಡೈನ್ ಪುತ್ರ ಹಂಟರ್ ಬಿಡೈನ್ ಅಕ್ರಮ ಗನ್ ಮಾರಾಟ ಪ್ರಕರಣದಲ್ಲಿ 25 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಮೂರು ಹಂತಗಳ ನ್ಯಾಯಾಲಯದಲ್ಲಿ ಹಂಟರ್ ಬಿಡೈನ್ ಗನ್ ಮಾರಾಟ ಪ್ರಕರಣದಲ್ಲಿ ಡ್ರಗ್ಸ್ ಬಳಸಿರುವುದು ಕೂಡ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೂರೂ ನ್ಯಾಯಾಲಯಗಳು ಹಂಟರ್ ಬಿಡೈನ್ ದೋಷಿ ಎಂದು ತೀರ್ಪು ನೀಡಿವೆ.

ಮೊದಲ ಹಂತದಲ್ಲಿ ಹಂಟರ್ 10 ವರ್ಷ ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ನಂತರ 5 ವರ್ಷ ಹಾಗೂ ಮೂರನೇ ಹಂತದಲ್ಲಿ ಮತ್ತೆ 10 ವರ್ಷ ಜೈಲಿನಲ್ಲಿ ಕಳೆಯಬೇಕಾಗಿದೆ.

ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡಿದ್ದು ಶಿಕ್ಷೆ ಅನುಭವಿಸುವುದಾಗಿ ಹಂಟರ್ ಬಿಡೈನ್ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಜೋ ಬಿಡೈನ್ ಮತ್ತು ಪತ್ನಿ ಮಗನ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

ಹಂಟರ್ ಬಿಡೈನ್ ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಅವರ ಹಿರಿಯ ಪುತ್ರನಾಗಿದ್ದು, ಪಾಯಿಂಟ್ 38 ಕ್ಯಾಲಿಬರ್ ಗನ್ ಅಕ್ರಮವಾಗಿ ಪಡೆಯಲು ಡ್ರಗ್ಸ್ ಬಳಸಿದ್ದರು. ಈ ಆರೋಪ ಎಲ್ಲಾ ನ್ಯಾಯಾಲಯಗಳಲ್ಲಿ ಸಾಬೀತಾಗಿದೆ. ಹಂಟರ್ ಜೈಲು ಶಿಕ್ಷೆಗೆ ದಿನಾಂಕ ನಿಗದಿಪಡಿಸಿಲ್ಲ. ಆದರೆ 120 ದಿನಗಳೊಳಗೆ ಶಿಕ್ಷೆ ಜಾರಿ ಮಾಡಲು ಸೂಚಿಸಲಾಗಿದೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign