ನಾಯಕ ಅಜಿಂಕ್ಯ ರಹಾನೆ ಮತ್ತು ಅಂಗಕೃಷ್ ರಘುವಂಶಿ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ 2026 ಟಿ-20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೆಕೆಆರ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 220 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ರಹಾನೆ ಮತ್ತು ಫಿನ್ ಅಲನ್ ಮೊದಲ ವಿಕೆಟ್ ಗೆ 69 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಫಿನ್ 37 ರನ್ ಬಾರಿಸಿ ಔಟಾದರೆ, ರಹಾನೆ 40 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 67 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು.
ಕೆಮರೂನ್ ಗ್ರೀನ್ (18) ನಿರಾಸೆ ಮೂಡಿಸಿದರೂ ರಘುವಂಶಿ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 51 ರನ್ ಗಳಿಸಿದರು. ಅಲ್ಲದೇ ರಿಂಕು ಸಿಂಗ್ ಜೊತೆ (33) 4ನೇ ವಿಕೆಟ್ ಗೆ 60 ರನ್ ಪೇರಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು.
ಮುಂಬೈ ಪರ ಶಾರ್ದೂಲ್ ಠಾಕೂರ್ ಮಾತ್ರ 3 ವಿಕೆಟ್ ಪಡೆದು ಮಿಂಚಿದರೆ ಉಳಿದವರು ನಿರಾಸೆ ಮೂಡಿಸಿದರು.



