Sunday, May 31, 2026
Google search engine
Homeಕ್ರೀಡೆಐಪಿಎಲ್ ಪಂದ್ಯಗಳು ರದ್ದು: ಬಿಸಿಸಿಐ ನಿರ್ಧಾರಕ್ಕೆ ಆರ್ ಸಿಬಿ ಸೆಲ್ಯೂಟ್

ಐಪಿಎಲ್ ಪಂದ್ಯಗಳು ರದ್ದು: ಬಿಸಿಸಿಐ ನಿರ್ಧಾರಕ್ಕೆ ಆರ್ ಸಿಬಿ ಸೆಲ್ಯೂಟ್

ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿದ ಬಿಸಿಸಿಐ ನಿರ್ಧಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ವಾಗತಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿತ್ತು.  ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಆರ್ ಸಿಬಿ ಟ್ವೀಟ್ ಮಾಡಿ  ಸ್ವಾಗತಿಸಿದೆ.

ಆರ್ ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯ ಇಂದು ಲಕ್ನೋದಲ್ಲಿ ನಡೆಯಬೇಕಿತ್ತು. ಆದರೆ ಬಿಸಿಸಿಐ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ಟೂರ್ನಿಯನ್ನು ರದ್ದುಗೊಳಿಸಿದೆ.

ಐಪಿಎಲ್ ಪಂದ್ಯ ರದ್ದುಗೊಳಿಸಿದ ಬಿಸಿಸಿಐ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಭಾರತದ ಸೈನಿಕರ ಶೌರ್ಯವನ್ನು ನಾವು ಸ್ವಾಗತಿಸುತ್ತೇವೆ. ಜೈ ಹಿಂದ್ ಎಂದು ಆರ್ ಸಿಬಿ ಟ್ವೀಟ್ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments