ಕುವೈತ್ ನಲ್ಲಿರುವ ವಿಶ್ವದ ಅತೀ ದೊಡ್ಡ ತೈಲ ಸಮೂಹ ಮೇಲೆ ಇರಾನ್ ಭಾರೀ ಪ್ರಮಾಣದ ದಾಳಿ ನಡೆಸಿದೆ. ಈ ಮೂಲಕ ಖಾರ್ಗ್ ದ್ವೀಪದ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.
ಇರಾನ್ ನ ಗುಪ್ತಚರ ಇಲಾಖೆ ಸಚಿವ, ರಕ್ಷಣಾ ಸಚಿವ ಸೇರಿದಂತೆ ಹಲವು ಮುಖಂಡರನ್ನು ಕಳೆದುಕೊಂಡ ನಂತರವೂ ಇರಾನ್ ಯುದ್ಧದ ತೀವ್ರತೆ ಕಡಿಮೆ ಆಗುತ್ತಿಲ್ಲ. ಬದಲಿಗೆ ಏಟಿಗೆ ಎದಿರೇಟು ಎಂಬಂತೆ ತಿರುಗೇಟು ನೀಡುತ್ತಾ ಬಂದಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿ ೧೯ನೇ ದಿನಕ್ಕೆ ಕಾಲಿಡುತ್ತಿದೆ. ಈ ಸಮಯದಲ್ಲಿ ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಇರಾನ್ ಇದೀಗ ಕುವೈತ್ ನ ತೈಲ ಘಟಕದ ಮೇಲೆ ದಾಳಿ ಮಾಡಿದೆ. ಈ ತೈಲ ಘಟಕದಿಂದ ಭಾರತಕ್ಕೆ ಕೂಡ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಭಾರತದ ಮೇಲೂ ಇದರ ಪರಿಣಾಮ ಆಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ತೈಲ ಮತ್ತು ಗ್ಯಾಸ್ ಮಾರುಕಟ್ಟೆಯಾದ ಟುರುಮೊಲಿಗೆ ಪ್ರಧಾನವಾಗಿ ಸರಬರಾಜು ಆಗುವ ಕತಾರ್ ನ ಅತೀ ದೊಡ್ಡ ತೈಲ ಘಟಕಗಳ ಹಬ್ ಆಗಿರುವ ರಾಸ್ ಲಾಫನ್ ಮೇಲೆ ಇರಾನ್ ಗುರುವಾರ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ದಾಳಿ ಬೆನ್ನಲ್ಲೇ ತೈಲ ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ವಿಶ್ವದ ಅತೀ ದೊಡ್ಡ ಎಲ್ ಪಿಜಿ ಉತ್ಪಾದನೆ ಕೂಡ ಈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಇದರ ಮೇಲಿನ ದಾಳಿಯಿಂದ ಭಾರತ ಮಾತ್ರವಲ್ಲದೇ ಅಮೆರಿಕ, ಇಂಗ್ಲೆಂಡ್, ರಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಕೂಡ ರಫ್ತು ಮಾಡಲಾಗುತ್ತದೆ.



