Sunday, May 17, 2026
Google search engine
Homeಕ್ರೀಡೆಭಾರತಕ್ಕೆ ಜೈಸ್ವಾಲ್‌ ಶತಕದ ಬಲ: ಇಂಗ್ಲೆಂಡ್‌ ಗೆ ಗೆಲ್ಲಲು 374 ರನ್‌ ಗುರಿ

ಭಾರತಕ್ಕೆ ಜೈಸ್ವಾಲ್‌ ಶತಕದ ಬಲ: ಇಂಗ್ಲೆಂಡ್‌ ಗೆ ಗೆಲ್ಲಲು 374 ರನ್‌ ಗುರಿ

ಆರಂಭಿಕ ಯಶಸ್ವಿ ಜೈಸ್ವಾಲ್‌ ಶತಕ ಆಲೌರೌಂಡರ್‌ ಗಳ ಅರ್ಧಶತಕಗಳ ನೆರವಿನಿಂದ ಭಾರತ ತಂಡ ೫ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು 374 ರನ್‌ ಸವಾಲೊಡ್ಡಿದೆ.

ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 2 ವಿಕೆಟ್‌ ಗೆ 74 ರನ್‌ ಗಳಿಂದ ಎರಡನೇ ಇನಿಂಗ್ಸ್‌ ಮುಂದುವರಿಸಿದ ಭಾರತ ತಂಡ 396 ರನ್‌ ಗೆ ಪತನಗೊಂಡಿತು.‌ ಮೊದಲ ಇನಿಂಗ್ಸ್‌ ನಲ್ಲಿ 23 ರನ್‌ ಮುನ್ನಡೆ ಪಡೆದಿದ್ದ ಇಂಗ್ಲೆಂಡ್‌ ಎರಡು ದಿನಗಳ ಆಟದಲ್ಲಿ ಸ್ಪರ್ಧಾತ್ಮಕ ಮೊತ್ತದ ಸವಾಲು ಪಡೆದಿದೆ.

70 ರನ್‌ ಗೆ 1 ವಿಕೆಟ್‌ ಕಳೆದುಕೊಂಡು ಒತ್ತಡದಲ್ಲಿದ್ದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್‌ ಮತ್ತು ಆಕಾಶ್‌ ದೀಪ್‌ ಮೂರನೇ ವಿಕೆಟ್‌ ಗೆ 107 ರನ್‌ ಜೊತೆಯಾಟದಿಂದ ತಂಡದಲ್ಲಿ ಹೋರಾಟದ ಕಿಚ್ಚು ಅನುಭವಿಸಿದರು.

ಸತತ ವೈಫಲ್ಯ ಅನುಭವಿಸಿದ್ದ ಯಶಸ್ವಿ ಜೈಸ್ವಾಲ್‌ 164 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ ಸಹಾಯದಿಂದ 118 ರನ್‌ ಬಾರಿಸಿದರು. ಇದು ಜೈಸ್ವಾಲ್‌ ಪಾಲಿಗೆ 8ನೇ ಶತಕವಾಗಿದೆ. ಆಕ್ಷ್‌ ದೀಪ್ 94 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 66 ರನ್‌ ಬಾರಿಸಿ ಚೊಚ್ಚಲ ಅರ್ಧಶತಕದ ಗೌರವಕ್ಕೆ ಪಾತ್ರರಾದರು.

ಕೊನೆಯ ಹಂತದಲ್ಲಿ ಹೋರಾಟ ನಡೆಸಿದ ವಾಷಿಂಗ್ಟನ್‌ ಸುಂದರ್‌ 46 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ಅರ್ಧಶತಕ (53) ಪೂರೈಸಿದ ಬೆನ್ನಲ್ಲೇ ಔಟಾದರು. ಇದಕ್ಕೂ ಮುನ್ನ ರವೀಂದ್ರ ಜಡೇಜಾ (53 ರನ್‌, 77 ಎಸೆತ, 5 ಬೌಂಡರಿ) ಹಾಗೂ ಧ್ರುವ ಜುರೆಲ್‌ (34) ಹೋರಾಟ ನಡೆಸಿದರು.

ಇಂಗ್ಲೆಂಡ್‌ ಪರ ಜೋಸ್‌ ಟಂಗ್‌ 5 ವಿಕೆಟ್‌ ಪಡೆದರೆ, ಗಸ್‌ ಅಟ್ಕಿಸನ್‌ 3 ವಿಕೆಟ್‌ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments