Sunday, May 31, 2026
Google search engine
Homeರಾಜ್ಯರಾಜ್ಯದ ಸಾಲ 7,64,655 ಕೋಟಿ ರೂ.ಗೆ ಜಿಗಿತ

ರಾಜ್ಯದ ಸಾಲ 7,64,655 ಕೋಟಿ ರೂ.ಗೆ ಜಿಗಿತ

ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 2025-26ನೇ ಸಾಲಿನ ಆಯವ್ಯಯವು 4.09 ಲಕ್ಷ ಕೋಟಿ ಗಾತ್ರದ್ದಾಗಿದೆ.
ಇದರಲ್ಲಿ ಅವರು ಬರೋಬ್ಬರಿ 1.16 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿಯೂ ಘೋಷಿಸಿದ್ದಾರೆ. ಇದರಿಂದ ಕರ್ನಾಟಕದ ಒಟ್ಟು ಸಾಲ 2026ರ ಮಾರ್ಚ್‌ ಅಂತ್ಯಕ್ಕೆ 7,64,655 ಕೋಟಿ ರೂ.ಗೆ ಜಿಗಿಯಲಿದೆ.
ಕೇಂದ್ರ ಸರ್ಕಾರದಿಂದ ಸಾಲ – 7000 ಕೋಟಿ ರೂ.ಮಾರುಕಟ್ಟೆ ಸಾಲ – 105000 ಕೋಟಿ ರೂ.ಎಲ್‌ಐಸಿ/ಎನ್‌ಸಿಸಿಎಫ್‌/ಎನ್‌ಸಿಡಿಸಿ/ಆರ್‌ಐಡಿಎಫ್‌ನಿಂದ ಸಾಲ – 4000 ಕೋಟಿ ರೂ.ವಿವಿಧ ಬಂಡವಾಳ ಜಮೆ – 36 ಕೋಟಿ ರೂ.ಮುಂಗಡಗಳ ವಸೂಲಿ – 134 ಕೋಟಿ ರೂ.ಒಟ್ಟು ಸಾಲ – 1,16,170 ಕೋಟಿ ರೂ.2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು 7,64,655 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿಎಸ್ ಡಿಪಿಯ ಶೇ. 24.91ರಷ್ಟಾಗಲಿದೆ. 2025-26ನೇ ಸಾಲಿಗೆ ರಾಜ್ಯದ ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ಪಾಲನೆ ಮಾಡಲಾಗಿದ್ದು, ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
2025-26ರಲ್ಲಿ ಆದಾಯ ಸಂಗ್ರಹ2025-26ನೇ ಸಾಲಿಗೆ ಒಟ್ಟು 2,92,477 ಕೋಟಿ ರೂ.ಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದ್ದು, ಇದರಲ್ಲಿ 2,08,100 ಕೋಟಿ ರೂ.ಗಳು ಸ್ವಂತ ತೆರಿಗೆಯಿಂದ ಬರಲಿದೆ. 16,500 ಕೋಟಿ ರೂ.ಗಳ ತೆರಿಗೆಯೇತರ ರಾಜಸ್ವ ಮತ್ತು ಕೇಂದ್ರ ಸರ್ಕಾರದ ಸ್ವೀಕೃತಿ 67,877 ಕೋಟಿ ರೂ. ಸೇರಿವೆ.2025-26ನೇ ಸಾಲಿಗೆ ಒಟ್ಟು 1,16,000 ಕೋಟಿ ರೂ.ಗಳ ಸಾಲ ಮತ್ತು 170 ಕೋಟಿ ರೂ.ಗಳ ಸಾಲಯೇತರ ಋಣೇತರ ಬಂಡವಾಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ.
ಈ ಎಲ್ಲಾ ಸ್ವೀಕೃತಿಗಳು ಸೇರಿ 2025-26ನೇ ಸಾಲಿನಲ್ಲಿ ಒಟ್ಟು 4,08,647 ಕೋಟಿ ರೂ.ಗಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ.ವೆಚ್ಚ 4.09 ಲಕ್ಷ ಕೋಟಿ ರೂ.2025-26ರ ಆಯವ್ಯಯದಲ್ಲಿ ಒಟ್ಟು 4,09,549 ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ. ಇದರಲ್ಲಿ 3,11,739 ಕೋಟಿ ರೂ.ಗಳ ರಾಜಸ್ವ ವೆಚ್ಚ, 71,336 ಕೋಟಿ ರೂ. ಬಂಡವಾಳ ವೆಚ್ಚ ಮತ್ತು 26,474 ಕೋಟಿ ರೂ.ಗಳ ಸಾಲ ಮರುಪಾವತಿ ಒಳಗೊಂಡಿದೆ
2025-26ನೇ ಸಾಲಿಗೆ, 19,262 ಕೋಟಿ ರೂ.ಗಳ ರಾಜಸ್ವ ಕೊರತೆಯನ್ನು ಅಂದಾಜಿಸಲಾಗಿದ್ದು, ಇದು ಜಿಎಸ್ ಡಿ.ಪಿ.ಯ ಶೇ. 0.63ರಷ್ಟಿದೆ. ವಿತ್ತೀಯ ಕೊರತೆ 90,428 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿ.ಎಸ್.ಡಿ.ಪಿ ಯ ಶೇ. 2.95ರಷ್ಟಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.2024-25ರ ಪರಿಷ್ಕೃತ ಅಂದಾಜು2024-25ರ ಪರಿಷ್ಕೃತ ಅಂದಾಜಿನಲ್ಲಿ ಒಟ್ಟು ಸ್ವೀಕೃತಿಗಳು 3,58,657 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.
ರಾಜಸ್ವ ಸ್ವೀಕೃತಿಗಳು 2,57,801 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಇದರಲ್ಲಿ ರಾಜ್ಯದ ಸ್ವಂತ ತೆರಿಗೆ ರಾಜಸ್ವವು 1,80,368 ಕೋಟಿ ರೂ., ತೆರಿಗೆಯೇತರ ರಾಜಸ್ವ 14,500 ಕೋಟಿ ರೂ. ಮತ್ತು ಕೇಂದ್ರದಿಂದ 62,933 ಕೋಟಿ ರೂ.ಗಳ ರಾಜಸ್ವ ಸ್ವೀಕೃತಿ ಸೇರಿದೆ.2024-25ರ ಪರಿಷ್ಕೃತ ಅಂದಾಜಿನಲ್ಲಿ, ಒಟ್ಟು ವೆಚ್ಚವು 3,65,865 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಇದರಲ್ಲಿ 2,83,928 ಕೋಟಿ ರೂ.ಗಳ ರಾಜಸ್ವ ವೆಚ್ಚ ಮತ್ತು ಸಾಲ ಮರುಪಾವತಿ ಒಳಗೊಂಡು ಬಂಡವಾಳ ವೆಚ್ಚ 81,937 ಕೋಟಿ ರೂ.ಗಳು ಸೇರಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments