Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ರಾಜ್ಯ

ಅಮರೇಶ್ ನುಗಡೂನಿ ಅವರ `ದಡ ಸೇರಿತು ತಂದೆ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 26 ವೀಕ್ಷಣೆಗಳು
maresh nugadoni

ನವದೆಹಲಿ: ಕನ್ನಡದಲ್ಲಿ ಲೇಖಕ ಅಮರೇಶ್​​​ ನುಗಡೊನಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದಿದೆ.

2025ರ ಡಿಸೆಂಬರ್​ನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ರದ್ದುಗೊಂಡ ನಂತರ ಸೋಮವಾರ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದ್ದು, ಈ ಬಾರಿ ಒಟ್ಟು 24 ಲೇಖಕರಿಗೆ ಪ್ರಶಸ್ತಿ ಲಭಿಸಿದೆ.

ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಇಂದು ಘೋಷಣೆ ಮಾಡಲು ಸಾಹಿತ್ಯ ಅಕಾಡೆಮಿ ಸಂತಸಗೊಂಡಿದೆ. ಒಟ್ಟು 24 ಭಾಷೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ 8 ಕವನ, 4 ಕಾದಂಬರಿ, 6 ಸಣ್ಣ ಕಥೆಗಳ ಪುಸ್ತಕ, 2 ಪ್ರಬಲ, 1 ಸಾಹಿತ್ಯ ವಿಮರ್ಶೆ, 1 ಆತ್ಮಚರಿತ್ರೆ, 2 ಸ್ಮರಣೆಯ ಪುಸ್ತಕಗಳು ಈ ಬಾರಿ ಪ್ರಶಸ್ತಿಗೆ ಭಾಜನವಾಗಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ತಿಳಿಸಿದೆ.

ಮಾಜಿ ರಾಯಭಾರಿ ಹಾಗೂ ಇಂಗ್ಲಿಷ್​ ಲೇಖಕ ನವತೇಜ್​ ಸರ್ನಾ ಅವರ ‘ಕ್ರಿಮ್ಸನ್​ ಸ್ಪ್ರಿಂಗ್’​ ಕಾದಂಬರಿ ಮತ್ತು ಹಿಂದಿ ಲೇಖಕರಾಗಿರುವ ಮಮ್ತಾ ಕಾಲಿಯಾ “ಜೀತೆ ಜೀ ಅಲಹಾಬಾದ್” ಸ್ಮರಣಾ ಸಂಪುಟ ಈ ಬಾರಿ ಪ್ರಶಸ್ತಿಗೆ ಭಾಜನವಾಗಿದೆ.

ಇದೇ ಮಾರ್ಚ್​ 31ರಂದು ಈ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಲಾಗುವುದು. ಈ ವೇಳೆ ತಾಮ್ರ ಫಲಕ, ಶಾಲು ಮತ್ತು 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಅಕಾಡೆಮಿ ಮಾಹಿತಿ ನೀಡಿದೆ.

ಪ್ರಶಸ್ತಿ ವಿಜೇತ ಇತರೆ ಲೇಖಕರು ಮತ್ತು ಅವರ ಕೃತಿ:

ಬೆಂಗಾಳಿಯ ಪ್ರಸನ್​ ಬಂಡೋಪಾದ್ಯಾಯ ಅವರ “ಶ್ರೇಷ್ಠ ಕವಿತಾ”,

ಗುಜರಾತಿಯಲ್ಲಿ ಯೋಗೇಶ್​ ವೈದ್ಯ ಅವರ “ಭಟ್ಟಖದಕಿ”,

ಕನ್ನಡದಲ್ಲಿ ಅಮರೇಶ್​ ನುಗಡೋನಿ ಅವರ “ದಡ ಸೇರಿಸು ತಂದೆ”,

ಮಲಯಾಣಂನಲ್ಲಿ ಎನ್​ ಪ್ರಭಾಕರನ್​ ಅವರ “ಮಾಯಮನುಶ್ಯರ್”,​

ಮರಾಠಿಯಲ್ಲಿ ರಾಜು ಭವಿಸ್ಕಾರ್​ ಅವರ “ಕಲ್ಯಾನಿಲ್ಯ ರೇಷ”,

ಪಂಜಾಬಿಯಲ್ಲಿ ಜಿಂದ್ರೆ ಅವರ “ಸೇಫ್ಟಿ ಕಿಟ್”​,

ರಾಜಸ್ಥಾನಿಯಲ್ಲಿ ಜಿತೇಂದ್ರ ಕುಮಾರ್​ ಸೋನಿ ಅವರ “ಭರ್ಖಾಮ”,

ತಮಿಳಿನಲ್ಲಿ ಸಾ ತಮಿಳ್​ಸೆಲ್ವಂ ಅವರ “ತಮಿಳ್​​ ಸಿರುಕಥಿಯಿನಿ ಥಡಂಗಳ್”​,

ಉರ್ದುವಿನಲ್ಲಿ ಪ್ರೀತ್​ಪಾಲ್​ ಸಿಂಗ್​ ಬೆತಬ್​ ಅವರ “ಸಫರ್​ ಜಾರಿ ಹೇ”,

ತೆಲುಗುದಲ್ಲಿ ನಂದಿನಿ ಸಿಂದ್​ ರೆಡ್ಡಿ ಅವರ “ಅನಿಮೇಶ”,

ಸಿಂಧಿಯಲ್ಲಿ ಭಗವಾನ್​ ಅತ್ಲಾನಿ ಅವರ “ವಾಗೂ”,

ಸಂತಾಲಿಯಲ್ಲಿ ಸುಮಿತ್ರಾ ಸೊರೆನ್​ ಅವರ “ಮಿಡ್ ಬಿರ್ನಾ ಚೆನ್ನೆ ಸಾವ್ ಇನಾಗ್ ಸಗಾಯ್”,

ಸಂಸ್ಕೃತದಲ್ಲಿ ಮಹಾಮಹೋಪಾಧ್ಯಾಯ ಸಾಹು ಭದ್ರೇಶ್‌ದಾಸ್ ಅವರ “ಪ್ರಸ್ಥಾನಚತುಸ್ತಯೇ ಬ್ರಹ್ಮಘೋಷಃ”,

ಒಡಿಯಾದಲ್ಲಿ ಗಿರಿಜಾಕುಮಾರ್ ಬಲಿಯಾರ್ ಸಿಂಗ್ ಅವರ “ಪದಪುರಾಣ’,

ನೇಪಾಳಿಯಲ್ಲಿ ಪ್ರಕಾಶ್ ಭಟ್ಟರು ಅವರ `ನೇಪಾಳಿ ಪರಂಪರೆಕ್ ಸಂಸ್ಕೃತಿ ರಾ ಸಭ್ಯತಾ ಕೊ ಡುಕುಟಿ’

ಮಣಿಪುರದಲ್ಲಿ ಮಣಿಪುರದ ಹಾಬಾಮ್ ನಳಿನಿ ಅವರ `ಕಂಗ್ಲಾಂದ್ರಿಬಾ ಇಪುಟ್​’

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment