Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ರಾಜ್ಯ

ಅಂತರಿಕ ಕಚ್ಚಾಟದಿಂದ ಲಿಂಗಾಯತರ ಜನಸಂಖ್ಯೆ 65 ಲಕ್ಷಕ್ಕೆ ಇಳಿಕೆ: ಸಚಿವ ಎಂಬಿ ಪಾಟೀಲ್ ವಿಷಾದ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 33 ವೀಕ್ಷಣೆಗಳು
mb patil
mb patil

ಬೆಂಗಳೂರು: ಅಂತರಿಕ ಕಚ್ಚಾಟದಿಂದ ರಾಜ್ಯದಲ್ಲಿದ್ದ 2 ಕೋಟಿಗಳಿಷ್ಟಿದ್ದ ಲಿಂಗಾಯತರ ಜನಸಂಖ್ಯೆ 65 ಲಕ್ಷಕ್ಕೆ ಇಳಿದಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷರೂ ಆದ ಬೃಹತ್ ಕೈಗಾರಿಕ ಸಚಿವ ಎಂ‌ ಬಿ ಪಾಟೀಲ್‌ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಲಿಂಗಾಯತರನ್ನು ಒಡೆದು ಆಳುವ ಒಂದು ಅಜೆಂಡಾ ಕೆಲಸ ಮಾಡುತ್ತಿದೆ,ಇದು ಕೂಡ ಲಿಂಗಾಯತರ ಜನಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಿದರು
ನಗರದ ಬಸವ ಸಮಿತಿ ಸಭಾಂಗಣದಲ್ಲಿ ಗುರುವಾರ ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ
ವಚನ ದರ್ಶನ: ಸತ್ಯ v/s ಮಿಥ್ಯ’ ಕೃತಿ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿ ವಚನ ದರ್ಶನ’ ಪುಸ್ತಕವು ಇದರ ಭಾಗವಾಗಿದೆ. ಇದಕ್ಕೆ ಸಮುದಾಯವು ಸಂಘಟಿತವಾಗಿ ಮತ್ತು ಸತ್ಯಪಕ್ಷಪಾತಿಯಾಗಿ ಉತ್ತರಿಸಬೇಕಿದೆ ಎಂದು ತಿಳಿಸಿದರು.

ವಚನ ಬರದಿದ್ದರೆ ನಾವ್ಯಾರೂ ಇರುತ್ತಿರಲಿಲ್ಲ12ನೇ ಶತಮಾನದಲ್ಲಿ ವಚನಗಳು ಬರದೆ ಇದ್ದಿದ್ದರೆ ಇಂದು ನಾವ್ಯಾರೂ ಇರುತ್ತಿರಲಿಲ್ಲ. ವಚನಗಳ ಬಗೆಗಿನ ಚರ್ಚೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಅದರ ಹಿಂದೆ ಇರುವ ಕೆಟ್ಟ ಅಜೆಂಡಾವನ್ನು ನಾವು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಲಿಂಗಾಯತ ಸ್ವಾಮೀಜಿಗಳು ಮತ್ತು ಮಠಗಳು ಮಾಡಬೇಕಾದ ಕೆಲಸ ಅಗಾಧವಾಗಿದೆ ಎಂದು ಅವರು ಪ್ರತಿಪಾದಿಸಿದರು

ವಚನಗಳ ಸ್ವೋಪಜ್ಞತೆಯನ್ನು ವಿರೋಧಿಸುವ ವಚನ ದರ್ಶನ ಪುಸ್ತಕಕ್ಕೆ ಲೇಖನ ಬರೆದಿರುವವರೂ ಲಿಂಗಾಯತರೇ. ಅದರ ಬಿಡುಗಡೆ ಕಾರ್ಯಕ್ರಮಗಳು ನಡೆದಿರುವುದು ಕೂಡ ಲಿಂಗಾಯತರ ಮಠಗಳಲ್ಲೇ. ಆದರೆ ಅದನ್ನು ಬಿಡುಗಡೆ ಮಾಡಿದವರು ಮಾತ್ರ ಲಿಂಗಾಯತರಲ್ಲ. ಇದು ರಾಜ್ಯದಲ್ಲಿ ಸಮುದಾಯದ ಅವಸ್ಥೆಯಾಗಿದೆ ಎಂದು ಅವರು ವಿಷಾದಿಸಿದರು.

ಒಕ್ಕಲಿಗರಲ್ಲಿ ಒಡಕಿಲ್ಲ:

ಒಕ್ಕಲಿಗರಲ್ಲಿ 104 ಉಪಪಂಗಡಗಳಿದ್ದರೂ ಅವರಲ್ಲಿ ಒಡಕಿಲ್ಲ. ಆ ಸಮುದಾಯಕ್ಕೆ ಒಬ್ಬರೇ ಸ್ವಾಮೀಜಿ ಮತ್ತು ಒಂದೇ ಅಧಿಕಾರ ಕೇಂದ್ರವಿದೆ. ಆದರೆ ಲಿಂಗಾಯತರು ಉಪಪಂಗಡಗಳ ಕಿತ್ತಾಟದಲ್ಲಿ ಹರಿದು ಹಂಚಿಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಲಿಂಗಾಯತರ ಜನಸಂಖ್ಯೆ 2 ಕೋಟಿಯಷ್ಟಿದೆ. ಆದರೆ ಉಪಪಂಗಡಗಳ ಕಚ್ಚಾಟದಿಂದ ಜಾತಿ ಗಣತಿಯಲ್ಲಿ ನಮ್ಮ‌ ಜನಸಂಖ್ಯೆ 65 ಲಕ್ಷವಷ್ಟೆ ಇದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಇದಕ್ಕೆ ಮತ್ತೊಂದು ಜಾತಿಗಣತಿ ಉತ್ತರವಲ್ಲ. ಇಡೀ ವೀರಶೈವ ಲಿಂಗಾಯತರೆಲ್ಲ ಒಂದೇ ಶೀರ್ಷಿಕೆಯಡಿ ಬರಬೇಕು.‌ ಆಗ ಮಾತ್ರ ಸಮುದಾಯದ ಯುವಜನರಿಗೆ ಮೀಸಲಾತಿ ಸಿಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಲಿಂಗಾಯತ ಸಮುದಾಯದಲ್ಲಿ ಉಪಪಂಗಡಗಳ ಮೇಲಾಟ ಕೊನೆಯಾಗದೆ ಇದ್ದರೆ ಉಳಿಗಾಲವಿಲ್ಲ. ಅಂತಹ ಪ್ರಯತ್ನ ಇಂದು ಆರಂಭವಾಗಿದೆಯಷ್ಟೆ. ಸಮುದಾಯದ ಒಳಗೆ ಇರುವ ವ್ಯತ್ಯಾಸಗಳು ಇನ್ನು ಇರಬಾರದು ಎಂದರು.

ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವರುದ್ರ ಮಹಾಸ್ವಾಮೀಜಿ, ಗಂಗಾ ಮಾತಾಜಿ, ಪ್ರಭು ಚನ್ನಬಸವ ಸ್ವಾಮಿಗಳು, ಶಾಮನೂರು ಶಿವಶಂಕರಪ್ಪ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ,ಸಾಹಿತಿ ಗೊ ರು ಚನ್ನಬಸಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್, ಲೇಖಕ ಟಿ ಆರ್ ಚಂದ್ರಶೇಖರ್, ಪ್ರೊ.ವೀರಭದ್ರಯ್ಯ ಮುಂತಾದವರು ಭಾಗವಹಿಸಿದ್ದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment