ಬೆಂಗಳೂರು: ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮೂವರು ಶಾಸಕರು ಸೇರಿದಂತೆ ನಾಲ್ವರು ಕಾಂಗ್ರೆಸ್ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಶಾಸಕರಾದ ನಾರಾ ಭರತ್ ರೆಡ್ಡಿ, ಗಣೇಶ್ (ಕಂಪ್ಲಿ ಕ್ಷೇತ್ರ), ಶ್ರೀನಿವಾಸ್ ಅವರ ಮನೆ ಮೇಲೂ ಇ.ಡಿ ದಾಳಿ ಮಾಡಿದೆ. ಮಾಜಿ ಸಚಿವ ನಾಗೇಂದ್ರ ಅವರ ಪಿಎ ಗೋವರ್ಧನ್ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ.
ಬಳ್ಳಾರಿ ಚುನಾವಣೆಗೆ ಪ್ರತಿ ಮತದಾರರಿಗೆ ತಲಾ 200 ರೂ. ಹಂಚಿಕೆ ಆರೋಪದಲ್ಲಿ ಸಂಸದ ತುಕಾರಾಂ ಮನೆ ಮೇಲೆ ದಾಳಿ ನಡೆದಿದೆ. ಮತದಾರರಿಗೆ 200 ರೂ.ನಂತೆ 20 ಕೋಟಿ ರೂ. ಹಣ ಹಂಚಿಕೆ ಆರೋಪ ಕೇಳಿಬಂದಿದೆ.
ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂಬ ಆರೋಪದ ಹಿನ್ನೆಲೆ ಶೋಧ ನಡೆದಿದೆ. ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.


