Tuesday, September 17, 2024
Google search engine
Homeಕಾನೂನುವರ್ಷಕ್ಕೆ 3.15 ಕೋಟಿ ಖರ್ಚು ಮಾಡಿದರೂ ಮಕ್ಕಳನ್ನು ನೋಡುವ ಭಾಗ್ಯವಿಲ್ಲ: ಅಸಹಾಯಕ ತಂದೆಯ ಮನವಿ!

ವರ್ಷಕ್ಕೆ 3.15 ಕೋಟಿ ಖರ್ಚು ಮಾಡಿದರೂ ಮಕ್ಕಳನ್ನು ನೋಡುವ ಭಾಗ್ಯವಿಲ್ಲ: ಅಸಹಾಯಕ ತಂದೆಯ ಮನವಿ!

ವಿಚ್ಛೇದನ ಪಡೆದ ಪತ್ನಿ ಮತ್ತು ಮಕ್ಕಳ ಜೀವನಾಂಶಕ್ಕಾಗಿ ವರ್ಷಕ್ಕೆ 3.15 ಕೋಟಿ ರೂ. ನೀಡುತ್ತಿದ್ದರೂ ಮಕ್ಕಳನ್ನು ನೋಡಲು ಅವಕಾಶ ಇಲ್ಲವಾಗಿದೆ. ಆದ್ದರಿಂದ ವಾರಾಂತ್ಯದಲ್ಲಿ ಮಕ್ಕಳನ್ನು ನೋಡಲು ಅವಕಾಶ ಕೊಡಿ ಎಂದು ಅಸಹಾಯಕ ತಂದೆಯೊಬ್ಬ ಹೈಕೋರ್ಟ್ ನಲ್ಲಿ ಗದ್ಗಿತರಾಗಿ ಮನವಿ ಮಾಡಿದ ವೀಡಿಯೋ ಇದೀಗ ವೈರಲ್ ಆಗಿದೆ.

ವಿನೀತ್‌ ಕೆ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಅಸಹಾಯಕ ತಂದೆ ಹಾಗೂ ಮಾಜಿ ಪತ್ನಿಯ ಪರ ವಕೀಲರು ವಾದ ಮಂಡಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಮಕ್ಕಳನ್ನು ನೋಡಲು ಆಗದೇ ಒದ್ದಾಡುತ್ತಿರುವ ಅಸಹಾಯಕ ತಂದೆ ಮಕ್ಕಳನ್ನು ನೋಡಲು ಅವಕಾಶ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ವೇಳೆ ವಿಚ್ಛೇದನ ನಂತರವೂ ತಿಂಗಳಿಗೆ ಲಕ್ಷಗಟ್ಟಲೆ ಹಣವನ್ನು ಹೆಂಡತಿ ಮಕ್ಕಳಿಗೆ ಖರ್ಚು ಮಾಡುತ್ತಿದ್ದರೂ ಮಕ್ಕಳ ಜೊತೆ ಸಮಯ ಕಳೆಯುವ ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಡಿವೋರ್ಸ್‌ ಬಳಿಕ ಗಂಡಸರ ಜೀವನ ಅಂದುಕೊಂಡಷ್ಟು ಸುಲಭವಿಲ್ಲ. ವಿಚ್ಛೇದನದ ಬಳಿ ಮಾಜಿ ಪತ್ನಿ ಮತ್ತು ಮಕ್ಕಳ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳಬೇಕಾಗುತ್ತದೆ. ಆದರೂ ಮಕ್ಕಳನ್ನು ನೋಡಲು ಆಗದೇ ಅವರ ಜೊತೆ ಸಮಯ ಕಳೆಯಲು ಆಗದೇ ಇರುವುದು ಎಷ್ಟು ಕಷ್ಟ ಎಂದು ತಂದೆ ಹೈಕೋರ್ಟ್ ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ.

ದೂರು ನೀಡಿದ ವ್ಯಕ್ತಿ ಮಾಸಿಕ 3.9 ಲಕ್ಷ ರೂ. ಸಂಪಾದಿಸುತ್ತಾರೆ. ದೂರವಾದ ಹೆಂಡತಿ ಮಕ್ಕಳ ವೆಚ್ಚಕ್ಕಾಗಿ ತಿಂಗಳಿಗೆ 2.35 ಲಕ್ಷ ನೀಡುತ್ತಿದ್ದಾರೆ. ಅಲ್ಲದೇ 65 ಸಾವಿರ ರೂ. ಅವರ ಬಾಡಿಗೆಯನ್ನು ಪಾವತಿಸುತ್ತಿದ್ದಾರೆ. ಅಂದರೆ ಪ್ರತಿ ವರ್ಷ ಮಾಜಿ ಪತ್ನಿ ಮತ್ತು ಮಕ್ಕಳ ಜೀವನಕ್ಕಾಗಿ 3.15 ಕೋಟಿ ಹಣ ಪಾವತಿಸಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡಿದರೂ ವಾರಕ್ಕೆ ಒಂದು ಬಾರಿಯಾದರೂ ಮಕ್ಕಳೊಂದಿಗೆ ಸಮಯ ಕಳೆಯುವ ಅವಕಾಶ ಇಲ್ಲ ಎಂದು ಅವರು ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ.

ಮಗ ಮತ್ತು ಮಗಳ ಸ್ಕೂಲ್‌ ಫೀಸ್‌ ಜೊತೆಗೆ ಅವರ ಮನೆ ಬಾಡಿಗೆ 1.5 ಲಕ್ಷ ರೂ. ಸಹ ನಾನೇ ಪಾವತಿಸುತ್ತಿದ್ದೇನೆ. ಆದರೆ ನನಗೆ ಮಕ್ಕಳ ಮುಖ ನೋಡುವ ಅವಕಾಶವೇ ಇಲ್ಲ. ದಯವಿಟ್ಟು ಶನಿವಾರ ಮತ್ತು ಭಾನುವಾರವಾದರೂ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶವನ್ನು ಕೊಡಿ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ.

ತಂದೆ ಇಷ್ಟೆಲ್ಲಾ ಖರ್ಚು ಮಾಡಿದರೂ ಮಕ್ಕಳನ್ನು ನೋಡಲು ಅವಕಾಶ ಇಲ್ಲದೇ ಇರುವುದು ಕ್ರೂರತನ ಎಂದು ಭಾವಿಸಿದ ನ್ಯಾಯಾಧೀಶರು, ಸಂಜೆ 3 ರಿಂದ 7 ಗಂಟೆಯವರೆಗೆ ಮಕ್ಕಳನ್ನು ನೋಡಲು ಅವಕಾಶವನ್ನು ನೀಡಿ ಆದೇಶ ನೀಡಿದ್ದಾರೆ.

ಆಗಸ್ಟ್‌ 24 ರಂದು ಎಕ್ಸ್ ನಲ್ಲಿ ಈ ವಿಡೀಯೋ ಪೋಸ್ಟ್ ಆಗಿದ್ದು, 2 ಲಕ್ಷ ಜನರು ವೀಕ್ಷಿಸಿದ್ದಾರೆ. ಒಬ್ಬರು ʼಇಷ್ಟೆಲ್ಲಾ ಪರಿಹಾರ ಕೊಟ್ರೂ ಮಕ್ಕಳ ಜೊತೆ ಸಮಯ ಕಳೆಯಲು ತಂದೆ ಬೇಡುವ ಪರಿಸ್ಥಿತಿ ಬಂದಿದೆ ನೋಡಿʼ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು `ಡಿವೋರ್ಸ್‌ ತುಂಬಾನೇ ದುಬಾರಿಯಾಗಿದೆʼ ಎಂದು ಪ್ರತಿಕ್ರಿಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments