ಎರಡು ಅಂತಸ್ತಿನ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸಜೀವದಹನಗೊಂಡ ಭೀಕರ ಘಟನೆ ಮುಂಬೈನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಚೆಂಬೂರ್ ನಗರದ ಸಿದ್ದಾರ್ಥ್ ಕಾಲೋನಿಯಲ್ಲಿ ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಎರಡು ಅಂತಸ್ತಿನ ಕಟ್ಟಡದ ನೆಲ ಮಾಳಿಗೆಯಲ್ಲಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಇಡೀ ಕಟ್ಟಡಕ್ಕೆ ವಯರಿಂದ ಒಂದೇ ಮಾಡಿದ್ದರಿಂದ ಬೆಂಕಿ ಮೇಲಿನ ಮಹಡಿಗೆ ಹಬ್ಬಿದ್ದು, ಎರಡನೇ ಮಹಡಿಯಲ್ಲಿ ವಾಸವಿದ್ದ ಕುಟುಂಬದ ಸದಸ್ಯರು ಮೃತಪಟ್ಟಿದ್ದಾರೆ.
ಪ್ಯಾರಿಸ್ ಗುಪ್ತ (7), ನರೇಂದ್ರ ಗುಪ್ತ (10), ಮಂಜು ಪ್ರೇಮ್ ಗುಪ್ತ (30), ಅನಿತಾ ಗುಪ್ತಾ (39), ವಿಧಿ ಗುಪ್ತ ಮತ್ತು ಗೀತಾ ಗುಪ್ತ ಮೃತಪಟ್ಟ ದುರ್ದೈವಿಗಳು.