Kannadavahini

ಬಾರಿಸು ಕನ್ನಡ ಡಿಂಡಿಮವ

salman khan
ತಾಜಾ ಸುದ್ದಿ ದೇಶ

ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದ 20 ವರ್ಷದ ಯುವಕ ಅರೆಸ್ಟ್

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಶಾಸಕ ಬಾಬಾ ಸಿದ್ದಿಕಿ ಪುತ್ರ ಜೀಶಾನ್ ಸಿದ್ದಿಕಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ದೆಹಲಿಯ ನೋಯ್ಡಾ ಮೂಲದ 20 ವರ್ಷದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಪೊಲೀಸರು 20 ವರ್ಷದ ಗುರ್ಫಾನ್ ಖಾನ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ.

ಬಾಬಾ ಸಿದ್ದಿಕಿ ಕೇಳಿದ ಹಣ ಕೊಡದ ಕಾರಣ ಹತ್ಯೆ ಆಗಿದ್ದಾರೆ. ಇದೇ ರೀತಿ ಹಣ ನೀಡದೇ ಇದ್ದರೆ ಸಲ್ಮಾನ್ ಖಾನ್ ಮತ್ತು ಜೀಶಾನ್ ಸಿದ್ದಿಕಿ ಅವರನ್ನು ಕೊಲೆ ಮಾಡುವುದಾಗಿ ಶುಕ್ರವಾರ ಸಂಜೆ ಬೆದರಿಕೆ ಸಂದೇಶ ಬಂದಿತ್ತು. ಸಂದೇಶ ಮೂಲ ಆಧರಿಸಿ ತನಿಖೆ ನಡೆಸಿದ ಪೊಲೀಸರು ಸೋಮವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.

ಇದಕ್ಕೂ ಮುನ್ನ ವಾಟ್ಸಪ್ ಮೂಲಕ 5 ಕೋಟಿ ನೀಡದೇ ಇದ್ದರೆ ಸಲ್ಮಾನ್ ಖಾನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ತರಕಾರಿ ವ್ಯಾಪಾರಿಯನ್ನು ಬಂಧಿಸಲಾಗಿತ್ತು.

LEAVE A RESPONSE

Your email address will not be published. Required fields are marked *