6
ವಾಗ್ವಾದದ ವೇಳೆ ಅಕಾಲಿದಳದ ಮುಖಂಡ ಹಾರಿಸಿದ ಗುಂಡು ತಗುಲು ಆಮ್ ಆದ್ಮಿ ಪಕ್ಷದ ಮುಖಂಡ ಗಾಯಗೊಂಡ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಫಜಿಲ್ಕಾ ಜಿಲ್ಲೆಯ ಜಲಾಲಬಾದ್ ನಲ್ಲಿ ಭಾನುವಾರ ಈ ದುರ್ಘಟನೆ ನಡೆದಿದ್ದು, ಆಪ್ ಪಕ್ಷದ ಸ್ಥಳೀಯ ಮುಖಂಡ ಮಂದೀಪ್ ಸಿಂಗ್ ಬ್ರಾರ್ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕಾಲಿದಳದ ವರ್ದೇವ್ ಸಿಂಗ್ ಮನ್ ಗುಂಡು ಹಾರಿಸಿದ್ದರಿಂದ ಆಪ್ ಮುಖಂಡ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಆಪ್ ಶಾಸಕ ಜಗದೀಪ್ ಕಂಬಜ್ ಗೋಲ್ಡೆ ಆರೋಪಿಸಿದ್ದಾರೆ.