Friday, May 17, 2024
Google search engine
Homeತಾಜಾ ಸುದ್ದಿಪುಷ್ಪ-2 ಬಿಡುಗಡೆ ದಿನಾಂಕ ಘೋಷಿಸಿದ ಅಲ್ಲು ಅರ್ಜುನ್!

ಪುಷ್ಪ-2 ಬಿಡುಗಡೆ ದಿನಾಂಕ ಘೋಷಿಸಿದ ಅಲ್ಲು ಅರ್ಜುನ್!

ಪುಷ್ಪ ಚಿತ್ರದ ಭರ್ಜರಿ ಯಶಸ್ಸಿನಿಂದ ಪುಷ್ಪಾ ದಿ ರೂಲ್ ಎರಡನೇ ಭಾಗದ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು,  ಸ್ವಾತಂತ್ರ್ಯ ದಿನಾಚರಣೆ ದಿನವಾದ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ ಎಂದು ನಟ ಅಲ್ಲು ಅರ್ಜುನ್ ಘೋಷಿಸಿದ್ದಾರೆ.

ಎಕ್ಸ್ ನಲ್ಲಿ ಪುಷ್ಪ ಚಿತ್ರದ ಕುರಿತು ಮಾಹಿತಿ ನೀಡಿರುವ ಅಲ್ಲು ಅರ್ಜುನ್, ಆಗಸ್ಟ್ 15ರಂದು ಚಿತ್ರ ಬಿಡುಗಡೆ ಆಗಲಿದೆ. ಮೇ 1ರಂದು ಪುಷ್ಪ ಪುಷ್ಪ ಹಾಡು ಬಿಡುಗಡೆ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.

ಪುಷ್ಪ ಪುಷ್ಪ ಚಿತ್ರದ ಹಾಡಿನ ತುಣುಕು ಬಿಡುಗಡೆ ಮಾಡಿರುವ ಅಲ್ಲು ಅರ್ಜುನ್, ಪೂರ್ತಿ ಹಾಡು ಮೇ 1ರಂದು ಬೆಳಿಗ್ಗೆ 11.07 ನಿಮಿಷಕ್ಕೆ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ.

ಚಿತ್ರದ ಹಾಡು ಬಿಡುಗಡೆ ಆದ ನಂತರ ಟೀಸರ್ ಬಿಡುಗಡೆ ಆಗಲಿದೆ. ಆದರೆ ಟೀಸರ್ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments