Saturday, July 6, 2024
Google search engine
Homeಕ್ರೀಡೆವಿಶ್ವಕಪ್ ಗೆದ್ದಿದ್ದಕ್ಕೆ ಬಂದಿದ್ದು 20 ಕೋಟಿ ರೂ. ಬಿಸಿಸಿಐ ಘೋಷಿಸಿದ್ದು 125 ಕೋಟಿ ಬಹುಮಾನ!

ವಿಶ್ವಕಪ್ ಗೆದ್ದಿದ್ದಕ್ಕೆ ಬಂದಿದ್ದು 20 ಕೋಟಿ ರೂ. ಬಿಸಿಸಿಐ ಘೋಷಿಸಿದ್ದು 125 ಕೋಟಿ ಬಹುಮಾನ!

ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಭರ್ಜರಿ ಬಹುಮಾನ ಮೊತ್ತ ಘೋಷಿಸಿದೆ.

ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಭಾನುವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಟಿ-20 ವಿಶ್ವಕಪ್ ಭಾರತ ಪುರುಷರ ತಂಡಕ್ಕೆ 125 ಕೋಟಿ ರೂ. ಬಹುಮಾನ ಘೋಷಿಸಲು ಸಂತೋಷವಾಗುತ್ತಿದೆ. ಭಾರತ ತಂಡದ ಆಟಗಾರರು, ಕೋಚ್, ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಒಂದೂ ಪಂದ್ಯ ಸೋಲದೇ ಅಜೇಯವಾಗಿ ವಿಶ್ವಕಪ್ ಗೆದ್ದು ಇತಿಹಾಸ ಬರೆದಿರುವುದು ಅದ್ಭುತ ಸಾಧನೆ ಎಂದು ಜೈ ಶಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಶ್ಲಾಘಿಷಿಸಿದ್ದಾರೆ.

ಟಿ-20 ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ 2.45 ದಶಲಕ್ಷ ಡಾಲರ್ ಅಂದರೆ ಸುಮಾರು 20.42 ಕೋಟಿ ರೂ. ಬಹುಮಾನ ಮೊತ್ತ ಲಭಿಸಿದರೆ, ಫೈನಲ್ ತಲುಪಿದ ಸಾಧನೆ ಮಾಡಿದ್ದ ದಕ್ಷಿಣ ತಂಡ 1.45 ದಶಲಕ್ಷ ಡಾಲರ್ (10.67 ಕೋಟಿ ರೂ.) ಬಹುಮಾನ ಮೊತ್ತ ಗಳಿಸಿತು.

ಇದೇ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದ ಆಫ್ಘಾನಿಸ್ತಾನ ಮತ್ತು ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡಗಳು 6.56 ಕೋಟಿ ರೂ. ಗಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments