Kannadavahini

ಬಾರಿಸು ಕನ್ನಡ ಡಿಂಡಿಮವ

rajanikanth house
ತಾಜಾ ಸುದ್ದಿ ದೇಶ ಮನರಂಜನೆ

ಸೂಪರ್ ಸ್ಟಾರ್ ರಜನಿಕಾಂತ್ ಮನೆಗೆ ನುಗ್ಗಿದ ಮಳೆ ನೀರು!

ತಮಿಳುನಾಡು ಚೆನ್ನೈ ಭಾರೀ ಮಳೆಗೆ ತತ್ತರಿಸಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಚೆನ್ನೈನ ನಿವಾಸಕ್ಕೂ ಮಳೆ ನೀರು ನುಗ್ಗಿದೆ.

ಚೆನ್ನೈನ ಅತ್ಯಂತ ಪ್ರತಿಷ್ಠಿತ ಬಡಾವಣೆ ಆಗಿರುವ ಪೋಸ್ ಗಾರ್ಡನ್ ನಲ್ಲಿರುವ ರಜನಿಕಾಂತ್ ನಿವಾಸಕ್ಕೆ ಮಳೆ ನೀರು ನುಗ್ಗಿದೆ. ಇದರಿಂದ ರಜನಿಕಾಂತ್ ಭೇಟಿಗೆ ಆಗಮಿಸುವ ಅಭಿಮಾನಿಗಳು ಹಾಗೂ ಗಣ್ಯರಿಗೆ ತೊಂದರೆ ಉಂಟಾಗಿದೆ.

ಪೋಸ್ ಗಾರ್ಡನ್ ನಲ್ಲಿ ರಜನಿಕಾಂತ್, ಅಳಿಯ ಹಾಗೂ ನಟ ಧನುಷ್ ಅಲ್ಲದೇ ಮಾಜಿ ಸಿಎಂ ಜಯಲಲಿತಾ ನಿವಾಸಗಳಿವೆ. ಈ ಮನೆಗಳಿಗೆ ಕೂಡ ನೀರು ನುಗ್ಗಿದೆ ಎಂದು ಹೇಳಲಾಗಿದೆ.

ರಜನಿಕಾಂತ್ ಅಭಿನಯದ ವೆಟ್ಟಿಯಾನ್ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕೂಲಿ ಚಿತ್ರದ ಬಿಡುಗಡೆ ಸಜ್ಜಾಗಿದ್ದು, ದೀಪಾವಳಿಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

LEAVE A RESPONSE

Your email address will not be published. Required fields are marked *