Saturday, May 16, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಸಫಾರಿ ಹೊರಟ್ಟಿದ್ದ ವಾಹನದ ಮೇಲೆ ಚಿರತೆ ದಾಳಿ: 13 ವರ್ಷದ ಬಾಲಕನಿಗೆ ಗಾಯ!

ಬೆಂಗಳೂರಿನಲ್ಲಿ ಸಫಾರಿ ಹೊರಟ್ಟಿದ್ದ ವಾಹನದ ಮೇಲೆ ಚಿರತೆ ದಾಳಿ: 13 ವರ್ಷದ ಬಾಲಕನಿಗೆ ಗಾಯ!

ಸಫಾರಿ ಹೊರಟ್ಟಿದ್ದ ಪ್ರವಾಸಿಗರ ವಾಹನದ ಮೇಲೆ ದಾಳಿ ಮಾಡಿದ ಚಿರತೆ 13 ವರ್ಷದ ಬಾಲಕನ ಕೈ ಪರಚಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ನಡೆದಿದ್ದು, ವೀಡಿಯೋ ವೈರಲ್‌ ಆಗಿದೆ.

ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬೊಲೆರೊ ನಿಧಾನವಾಗಿ ಚಲಿಸುತ್ತಿದ್ದಾಗ ದಿಢೀರನೆ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಚಿರತೆ ವಾಹನದ ಮೇಲೇರಿ ಹೋಗಿದೆ.

ಇದೇ ವೇಳೆ ಬೊಲೆರೊ ವಾಹನ ನಿಲ್ಲಿಸಿದ್ದರಿಂದ ಕಿಟಕಿ ಪಕ್ಕದಲ್ಲಿ ಕುಳಿತಿದ್ದ ಬಾಲಕನಿಗೆ ಪರಚಿದೆ. ಗಾಯಗೊಂಡ ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಬಾಲಕ ಮನೆಗೆ ತೆರಳಿದ್ದಾನೆ.

ಚರತೆ ಬೊಲೆರೋ ಹತ್ತಿ ದಾಳಿ ನಡೆಸುತ್ತಿರುವ ದೃಶ್ಯ ಹಿಂಬದಿಯ ವಾಹನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಾರ್ಕ್ ಒಳಗೆ ಸಂಚಾರ ಮಾಡುವ ಬಸ್‌ ಹಾಗೂ ಜೀಪ್‌ಗಳಲ್ಲಿ ಸಣ್ಣದಾದ ರಂದ್ರ ಇದ್ದು ಅದನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲು ಕೆಎಸ್‌ಟಿಡಿಸಿಗೆ ಸೂಚನೆ ನೀಡಿದ್ದು, ಇನ್ನು ಮುಂದೆ ಇಂತಹ ಘಟನೆ ಆಗದಂತೆ ಎಚ್ಚರ ವಹಿಸಲು ಸಿಬ್ಬಂದಿಗೆ ಹಾಗೂ ಚಾಲಕರಿಗೆ ಸೂಚನೆ ನೀಡಿದ್ದೇನೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸುರ್ಯಸೇನ್ ಮಾಹಿತಿ ನೀಡಿದ್ದಾರೆ.

ಈ ಹಿಂದೆಯೂ ಕೂಡ ಒಮ್ಮೆ ಚಿರತೆ ಹಾಗೂ ಇನ್ನೊಮ್ಮೆ ಹುಲಿ ಇದೇ ರೀತಿ ದಾಳಿ ಮಾಡಿತ್ತು. ಘಟನೆಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಆಘಾತ ವ್ಯಕ್ತಪಡಿಸಿದ್ದು, ಪ್ರವಾಸಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments