Wednesday, June 17, 2026
Google search engine
Homeಕ್ರೀಡೆಹ್ಯಾಟ್ರಿಕ್‌ ಗೋಲಿನೊಂದಿಗೆ ವಿಶ್ವಕಪ್‌ ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಲಿಯೊನೆಲ್‌ ಮೆಸ್ಸಿ!

ಹ್ಯಾಟ್ರಿಕ್‌ ಗೋಲಿನೊಂದಿಗೆ ವಿಶ್ವಕಪ್‌ ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಲಿಯೊನೆಲ್‌ ಮೆಸ್ಸಿ!

ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿ ನಿಂತಿರುವ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ವಿಶ್ವಕಪ್‌ ನ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್‌ ಗೋಲು ಸಿಡಿಸಿ ಅಲ್ಜಿರಿಯಾ ವಿರುದ್ಧ ಸುಲಭ ಗೆಲುವು ತಂದುಕೊಟ್ಟಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ಬುಧವಾರ ಮುಂಜಾನೆ ಅಮೆರಿಕದ ಕಾನಸ್‌ ಕ್ರೀಡಾಂಗಣದಲ್ಲಿ ನಡೆದ ಜಿ ಗುಂಪಿನ ಮೊದಲ ಪಂದ್ಯದಲ್ಲಿ ಲಿಯೊನೆಲ್‌ ಮೆಸ್ಸಿ ಹ್ಯಾಟ್ರಿಕ್‌ ಗೋಲು ಸಿಡಿಸಿದರು. ಈ ಮೂಲಕ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಭರ್ಜರಿ ಆರಂಭ ಪಡೆಯಿತು.

ಲಿಯೊನೆಲ್ ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ವಿಶ್ವಕಪ್‌ ನಲ್ಲಿ 16 ಗೋಲು ಗಳಿಸಿ ಜರ್ಮನಿಯ ಮಿರಸ್ಲೊವ್‌ ಕ್ಲೋಸ್‌ ಅವರ ಅವರ ಅತೀ ಹೆಚ್ಚು ಗೋಲಿನ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೆಸ್ಸಿ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮೊದಲ ಗೋಲು ಬಾರಿಸಿದರು. ರೋಡ್ರಿಗೋ ಡೀ ಪಾಲ್‌ ನೀಡಿದ ಪಾಸ್‌ ನಿಂದ ಗೋಲಿನ ಖಾತೆ ತೆರೆದರು.

ಎರಡನೇ ಗೋಲು ಎರಡನೇ ಅವಧಿಯ ಆಟದ ಆರಂಭದಲ್ಲೇ ಬಂದಿತು. ಪಂದ್ಯ ಮುಕ್ತಾಯಕ್ಕೆ ಮುನ್ನ ಮತ್ತೊಂದು ಗೋಲು ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣ ಎದ್ದು ಹ್ಯಾಟ್ರಿಕ್‌ ಗೋಲು ಸಂಭ್ರಮಿಸಿತು.
ವಿಶೇಷ ಅಂದರೆ ಮೆಸ್ಸಿ ಅರ್ಜೆಂಟೀನಾ ಪರ ವಿಶ್ವಕಪ್‌ ನಲ್ಲಿ ಆಡಿದ 20ನೇ ವರ್ಷ ಆಚರಿಸುತ್ತಿರುವ ವೇಳೆ ವಿಶ್ವಕಪ್‌ ನಲ್ಲಿ ಹ್ಯಾಟ್ರಿಕ್‌ ಗೋಲಿನ ಜೊತೆ ಅತೀ ಹೆಚ್ಚು ಗೋಲುಗಳ ಸರದಾರ ಎಂಬ ದಾಖಲೆಗಳನ್ನು ಬರೆದಿದ್ದು.

ವಿಶ್ವಕಪ್‌ ಪಾದರ್ಪಣಾ ಪಂದ್ಯದಲ್ಲೇ ಸರ್ಬಿಯಾ ವಿರುದ್ಧ ಗೋಲು ಬಾರಿಸಿದ್ದ ಮೆಸ್ಸಿ, ಇದೀಗ ವಿಶ್ವಕಪ್‌ ನ ೫ ಆವೃತ್ತಿಗಳಲ್ಲೂ ಗೋಲು ಬಾರಿಸಿ ಆಟಗಾರ ಎಂಬ ಮತ್ತೊಂದು ಅಪರೂಪದ ದಾಖಲೆಗೆ ಪಾತ್ರರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments