ಇಂಡಿಯನ್ ಆಯಿಲ್ ಕಾರ್ಪೊರೇಷನ್ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ 17 ರೂ. ಇಳಿಕೆ ಮಾಡಿದೆ. ಆದರೆ ಸಾಮಾನ್ಯ ಜನರು ಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ನಿರಾಸೆ ಮೂಡಿಸಿದೆ.
ಮಂಗಳವಾರದಿಂದಲೇ ಜಾರಿಗೆ ಬರುವಂತೆ 19 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ದರದಲ್ಲಿ 17 ರೂ. ಇಳಿಕೆ ಮಾಡಲಾಗಿದೆ. ಆದರೆ 14 ಕೆಜಿ ತೂಕದ ಸಾಮಾನ್ಯ ಜನರು ಬಳಸುವ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಕಳೆದ ತಿಂಗಳು ಅಡುಗೆ ಅನಿಲ ದರ 50 ರೂ. ಏರಿಕೆ ಮಾಡಲಾಗಿತ್ತು. ಆದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಏರಿಸಿದ ದರ ಇಳಿಕೆ ಮಾಡದೇ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಮಾತ್ರ ಇಳಿಕೆ ಮಾಡಿದೆ.
ಮಂಗಳವಾರದಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಕೋಲ್ಕತಾದಲ್ಲಿ 1868.50 ರೂ.ನಿಂದ 1851.50 ರೂ.ಗೆ ಇಳಿಕೆಯಾಗಿದೆ. ಮುಂಬೈನಲ್ಲಿ 1713.50 ರೂ.ನಿಂದ 1699 ರೂ.ಗೆ, ಚೆನ್ನೈನಲ್ಲಿ 1921.50 ರೂ.ನಿಂದ 1906.50ಗೆ ಹಾಗೂ ದೆಹಲಿಯಲ್ಲಿ 1747.50 ರೂ.ಗೆ ದೊರೆಯಲಿದೆ.



