Monday, June 8, 2026
Google search engine
Homeರಾಜ್ಯಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿದ ಮಂಗಳೂರು ಮಹಿಳೆ!

ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿದ ಮಂಗಳೂರು ಮಹಿಳೆ!

ಮಗಳಿಗೆ ಕಂಪ್ಯೂಟರ್ ಖರೀದಿ, ಊರಿಗೆ ಹೋಳಿಗೆ ಊಟ, ವಾಷಿಂಗ್ ಮಷಿನ್ ಖರೀದಿ, ಮನೆಗೆ ಬಾಗಿಲು ಹಾಕಿಸಿದ್ದು.. ಹೀಗೆ ಗೃಹಲಕ್ಷ್ಮೀ ಹಣದಲ್ಲಿ ರಾಜ್ಯದಲ್ಲಿ ಹಲವಾರು ಕುಟುಂಬಗಳು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳುತ್ತಿದ್ದಾರೆ.

ಇದೀಗ ಮಂಗಳೂರಿನ ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿದ್ದಾರೆ. ಅಲ್ಲದೇ ಉಪ್ಪಿನಕಾಯಿ ಮಾರಾಟಕ್ಕೆ ಈ ಸ್ಕೂಟರ್ ಬಳಸಿಕೊಂಡು ಜೀವನ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮಂಗಳೂರಿನ ಕಲ್ಲಾಪು ಪಟ್ಲದ ಝೀನತ್ ಎಂಬ ಮಹಿಳೆ ಉಪ್ಪಿನಕಾಯಿ ಮಾರಾಟದ ಮೂಲಕ ತನ್ನ ಜೀವನ ಸಾಗಿಸುತ್ತಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸಲು ಕಷ್ಟಪಡುತ್ತಿದ್ದ ಈಕೆ ಇದೀಗ ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿ ಅದರ ನೆರವಿನಿಂದ ತಮ್ಮ ಉದ್ದಿಮೆಯನ್ನು ಸರಾಗವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

scooter

ಸ್ಕೂಟರ್ ಮೇಲೆ ಸಿಎಂ, ಡಿಸಿಎಂ, ಹೆಬ್ಬಾಳ್ಕರ್​, ಖಾದರ್​ ಪೋಟೋ!

ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದ ಹಣದಿಂದ ಸ್ಕೂಟರ್​​ ಖರೀದಿಸಿರುವುದರಿಂದ ಈ ಸ್ಕೂಟರ್​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸ್ಪೀಕರ್ ಯುಟಿ ಖಾದರ್​​ ಅವರ ಫೋಟೋ ಹಾಕಲಾಗಿದೆ. ಸರಕಾರದ ಯೋಜನೆಯಿಂದ ಈ ಸ್ಕೂಟರ್​ ಖರೀದಿಸಿರುವುದರಿಂದ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಫೋಟೋ ಹಾಕಿರುವುದಾಗಿ ಝೀನತ್ ತಿಳಿಸಿದ್ದಾರೆ.

“ನನಗೆ ಸಹಾಯ ಮಾಡಿದ ಎಲ್ಲರಿಗೂ, ಸರ್ಕಾರದ ಯೋಜನೆಗೆ, ಸಹಕರಿಸಿದವರಿಗೆ ಧನ್ಯವಾದ. ಈ ಯೋಜನೆ ನಮ್ಮಂಥವರ ಬದುಕಿಗೆ ತುಂಬ ಉಪಕಾರಿಯಾಗಿದೆ. ಅದಕ್ಕಾಗಿ ಅವರು ಈ ಸ್ಕೂಟರ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸ್ಪೀಕರ್ ಯು.ಟಿ. ಖಾದರ್​ ಅವರ ಫೋಟೋ ಹಾಕಿದ್ದೇನೆ” ಎಂದು ಝೀನತ್​ ಹೇಳುತ್ತಾರೆ.

ಮಕ್ಕಳನ್ನು ಸಾಕುವ ಒತ್ತಡ

ಝೀನತ್​​​​​ ಅವರ ಬದುಕು ಸುಲಭವಾಗಿರಲಿಲ್ಲ. ದಾಂಪತ್ಯ ಜೀವನ ವಿಚ್ಚೇದನ ಹಾದಿಯಲ್ಲಿದೆ. ಈ ನಡುವೆ ಕೋರ್ಟ್ ಕೇಸ್ ನಿಂದ ಇಬ್ಬರು ಮಕ್ಕಳ ಪಾಲನೆ, ದಿನನಿತ್ಯದ ಖರ್ಚು, ಮಾನಸಿಕ ಒತ್ತಡ –ಎಲ್ಲವೂ ಒಬ್ಬಂಟಿಯಾಗಿ ಎದುರಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಗಂಡನಿಂದ ಯಾವುದೇ ನಿಯಮಿತ ಸಹಾಯ ಸಿಗದೇ, ಮಕ್ಕಳ ಜೀವನ ಸಾಗಿಸುವ ಜವಾಬ್ದಾರಿ ಸಂಪೂರ್ಣವಾಗಿ ಝೀನತ್​ ಅವರ ಮೇಲೆ ಬಿತ್ತು. ಅದೂ ಅಲ್ಲದೆ ತನಗೆ ಸ್ವಂತ ಮನೆಯೂ ಇಲ್ಲದೆ ತಂದೆ ಮನೆಯಲ್ಲಿ ವಾಸವಾಗಿದ್ದಾರೆ.

ಉದ್ಯೋಗ ಇಲ್ಲದ ಸ್ಥಿತಿಯಲ್ಲಿ, ಮನೆಯಲ್ಲೇ ತಯಾರಿಸಬಹುದಾದ ಉಪ್ಪಿನಕಾಯಿ ಅವರ ಜೀವನದ ಆಸರೆಯಾಯಿತು. ಆದರೆ ಮಾರಾಟಕ್ಕೆ ಹೋಗಲು, ಗ್ರಾಹಕರನ್ನು ತಲುಪಲು ಸಾರಿಗೆ ಎಂಬ ದೊಡ್ಡ ಸಮಸ್ಯೆ ಎದುರಾಯಿತು.

ಇದೇ ಸಮಯದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಝೀನತ್​ ಬದುಕಿಗೆ ಆಶಾಕಿರಣವಾಯಿತು. ತಿಂಗಳಿಗೆ ಬಂದ ಹಣವನ್ನು ವ್ಯರ್ಥ ಮಾಡದೇ, ಜಮಾ ಮಾಡಿಕೊಂಡು ಸುಮಾರು 20 ಸಾವಿರ ರೂ. ವೆಚ್ಚದಲ್ಲಿ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಖರೀದಿಸಿದ್ದಾರೆ.

ಈಗ 7 ತಿಂಗಳಿಂದ ಸ್ಕೂಟರ್‌ನಲ್ಲೇ ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದೇನೆ. ಮುಂಚೆ ವ್ಯಾಪಾರ ಮಾಡೋಕೆ ತುಂಬಾ ತೊಂದರೆ ಇತ್ತು. ಈಗ ಸುಲಭವಾಗಿದೆ ಎಂದು ಝೀನತ್ ಹೇಳುತ್ತಾರೆ.

ಬದಲಾದ ದಿನಚರಿ

ಸ್ಕೂಟರ್ ಬಂದ ನಂತರ ಝೀನತ್ ಅವರ ದಿನಚರಿ ಸಂಪೂರ್ಣವಾಗಿ ಬದಲಾಗಿದೆ. ಮನೆ ಮನೆಗೆ ತೆರಳಿ ಮಾರಾಟ ಮಾಡುವ ಸಂದರ್ಭದಲ್ಲಿ ಸಮಯ ಉಳಿತಾಯ ಆಗುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ಆದಾಯದಲ್ಲಿ ಸುಧಾರಣೆ ಆಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಒಟ್ಟು ಸುಮಾರು 50 ಸಾವಿರ ರೂ. ಸಹಾಯ ದೊರೆತಿದ್ದು, ಅದರಿಂದ ಜೀವನ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿದೆ ಎಂದು ಝೀನತ್ ಅವರ ಮಾತು.

ಗೃಹಲಕ್ಷ್ಮೀ ಯೋಜನೆ ಬಡ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನಿಜವಾಗಿಯೂ ಉಪಕಾರಿಯಾಗುತ್ತಿದೆ. ಝೀನತ್ ಅವರು ಅದನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿಯಾಗಿದ್ದಾರೆ ಎಂದು ಝೀನತ್‌ ಅವರ ಸಹೋದರ ವಕಲ್ಲಾಪು ಪಟ್ಲದ ಹನೀಫ್ ಸೋಲಾರ್ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments