Sunday, June 7, 2026
Google search engine
Homeರಾಜ್ಯಟ್ರೋಫಿಗೆ ವನ್ಯ ಜೀವಿಗಳ ಅಂಗಾಂಗ ಬಳಕೆಗೆ ಅವಕಾಶವಿಲ್ಲ: ಸಚಿವ ಈಶ್ವರ ಖಂಡ್ರೆ

ಟ್ರೋಫಿಗೆ ವನ್ಯ ಜೀವಿಗಳ ಅಂಗಾಂಗ ಬಳಕೆಗೆ ಅವಕಾಶವಿಲ್ಲ: ಸಚಿವ ಈಶ್ವರ ಖಂಡ್ರೆ

ವಿಧಾನಪರಿಷತ್ತು: ವನ್ಯಜೀವಿಗಳ ಅಂಗಾಂಗಗಳನ್ನು ಟ್ರೋಫಿಗಳಿಗೆ ಬಳಕೆ ಮಾಡಲು ಪರವಾನಗಿ ನೀಡಲು ಅವಕಾಶ ಇಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಕುಶಾಲಪ್ಪ ಎಂ.ಪಿ. (ಸುಜಾ) ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಡಿಯಲ್ಲಿ ವಿಶೇಷವಾಗಿ ಕೊಡಗಿಗೆ ವನ್ಯಜೀವಿ, ಟ್ರೋಫಿಯನ್ನು ಇಟ್ಟುಕೊಳ್ಳಲು ಈಗ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ಕಾಯಿದೆ ಜಾರಿ ಆದ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿರುವ ಇಂತಹ ವನ್ಯಜೀವಿ ಅಂಗಾಂಗ, ಟ್ರೋಫಿಗಳನ್ನು ಘೋಷಣೆ ಮಾಡಿಕೊಂಡು ಮಾಲಿಕತ್ವದ ಪ್ರಮಾಣ ಪತ್ರ ಪಡೆಯಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು, ನಂತರ 2003ರಲ್ಲಿ 180 ದಿನಗಳ ಕಾಲ ಇಂತಹ ಟ್ರೋಫಿ ಘೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನಂತರ ಅದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದರು.

ತಾವು ಸಚಿವರಾದ ತರುವಾಯ 2024 ಜನವರಿ 10ರಂದು ಅಧಿಸೂಚನೆ ಹೊರಡಿಸಿ, ಅಪರಾಧ ಪ್ರಕರಣ ದಾಖಲಾಗದಂತೆ ತಪ್ಪಿಸಲು 90 ದಿನಗಳ ಒಳಗಾಗಿ ತಮ್ಮ ಬಳಿ ಇರುವ ಇಂತಹ ವನ್ಯಜೀವಿ ಅಂಗಾಂಗಗಳನ್ನು ಅಧ್ಯರ್ಪಿಸಲು ಅವಕಾಶ ನೀಡಲಾಗಿತ್ತು. ಈ ಕಾಯಿದೆಗೆ ತಿದ್ದುಪಡಿ ತರುವ ಅವಕಾಶ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments