Sunday, May 31, 2026
Google search engine
Homeಅಪರಾಧಮಗು ಆರೈಕೆ ಆಗಲ್ಲ ಅಂತ 9 ತಿಂಗಳ ಹಸುಗೂಸು ಕೊಂದ ಹೆತ್ತತಾಯಿ!

ಮಗು ಆರೈಕೆ ಆಗಲ್ಲ ಅಂತ 9 ತಿಂಗಳ ಹಸುಗೂಸು ಕೊಂದ ಹೆತ್ತತಾಯಿ!

ಆರ್ಥಿಕ ಮುಗ್ಗಟ್ಟಿನಿಂದ ಮಗು ಆರೈಕೆ ಮಾಡಲು ಆಗಲ್ಲ ಅಂತ 9 ತಿಂಗಳ ಹಸುಗೂಸನ್ನು ಹೆತ್ತತಾಯಿಯೇ ನೀರಿನಲ್ಲಿ ಮುಳುಗಿಸಿ ಕೊಂದ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗದಲ ನಾಗಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 9 ತಿಂಗಳ ಹಸುಗೂಸನ್ನು ತಾಯಿ ರಾಧೆ ಕೊಲೆ ಮಾಡಿದ್ದಾರೆ.

ಗಂಡ ಪವನ್ ಕುಡಿತದ ದಾಸ್ಯಕ್ಕೆ ಬಿದ್ದಿದ್ದು, ಮನೆ ನಿರ್ವಹಣೆಗೆ ಹಣ ನೀಡುತ್ತಿರಲಿಲ್ಲ. ಮನೆ ನಡೆಸಲು ಕಷ್ಟವಾಗಿದ್ದು, ಇದರ ನಡುವೆ ಮಗುವನ್ನು ಸರಿಯಾಗಿ ಆರೈಕೆ ಮಾಡಲು ಆಗುತ್ತಿಲ್ಲ ಎಂದು ತಾಯಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ.

ನಗರದ ವಿಶ್ವೇಶ್ವರಪುರದಲ್ಲಿ ವಾಸವಾಗಿದ್ದ ಪವನ್ ಮತ್ತು ರಾಧಾ ದಂಪತಿಯ ಗಂಡು ಮಗುವನ್ನು ತಡರಾತ್ರಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಆರೋಪಿ ರಾಧಾಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments