Sunday, May 17, 2026
Google search engine
Homeದೇಶಮಾಟ ಮಾಡ್ತಾರೆ ಅಂತ ಒಂದೇ ಕುಟುಂಬ 5 ಮಂದಿಯನ್ನು ಜೀವಂತ ದಹಿಸಿದ ಸ್ಥಳೀಯರು!

ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬ 5 ಮಂದಿಯನ್ನು ಜೀವಂತ ದಹಿಸಿದ ಸ್ಥಳೀಯರು!

ಮಾಟ ಮಂತ್ರ ಮಾಡುವ ಭೀತಿಯಿಂದ ಒಂದೇ ಕುಟುಂಬದ 5 ಮಂದಿಯನ್ನು ಸ್ಥಳೀಯರು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಪುರ್ನಿಯಾ ಜಿಲ್ಲೆಯ ಟೆಟಗಾಮ ಗ್ರಾಮದಲ್ಲಿ ಕುಟುಂಬದವರು ರಾತ್ರಿ ಮಲಗಿದ್ದಾಗ ಸುಮಾರು 50 ಜನರ ಗುಂಪು ಮನೆಗೆ ಬೆಂಕಿ ಹಚ್ಚಿ ಸಜೀವದಹನಗೊಳಿಸಿದ್ದಾರೆ. ಸೀತಾದೇವಿ ಹಾಗೂ ಆಕೆಯ 16 ವರ್ಷದ ಮಗ ದುರಂತದಲ್ಲಿ ತಪ್ಪಿಸಿಕೊಂಡಿದ್ದಾರೆ.

ಮನೆಯ ಮಹಿಳೆ ಮಾಟ ಮಾಡುತ್ತಿದ್ದಾರೆ ಎಂದು ಅನುಮಾನಿಸಿದ್ದ ಗುಂಪು ಮನೆಯವರನ್ನು ಚೆನ್ನಾಗಿ ಥಳಿಸಿ ಬೆಂಕಿ ಹಚ್ಚಿದರು. ಈ ವೇಳೆ ನಾನು ಮತ್ತು ಅಮ್ಮ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆವು ಎಂದು 16 ವರ್ಷದ ಬಾಲಕ ವಿವರಿಸಿದ್ದಾನೆ.

ಮಾಟ ಮಂತ್ರ ಮಾಡುತ್ತಿಯಾ ಎಂದು ಆರೋಪಿಸಿದ ಗುಂಪು ಬೊಂಬು ದೊಣ್ಣೆಗಳನ್ನು ಹಿಡಿದು ಬಂದು ತಾಯಿ-ತಂದೆ, ಮಗ ಹಾಗೂ ಸೊಸೆ ಸೇರಿದಂತೆ ಎಲ್ಲರ ಮೇಲೆ ಮನಸೋಇಚ್ಛೆ ಥಳಿಸಿದರು. ಗ್ರಾಮಸ್ಥರು ಯಾರೂ ಕೂಡ ತಡೆಯಲು ಬರಲಿಲ್ಲ ಎಂದು ಬಾಲಕ ಹೇಳಿದ.

ಗುಂಪು ಮನಬಂದಂತೆ ಥಳಿಸಿದ ನಂತರ ಗುಡಿಸಲ್ಲಿ ಹಾಕಿ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳದಲ್ಲಿ ಮೂರು ವರ್ಷದ ಮಗು ಸೇರಿ ಇಬ್ಬರು ಮೃತಪಟ್ಟರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments