Saturday, May 30, 2026
Google search engine
Homeರಾಜ್ಯಭಿಕ್ಷೆ ಬೇಡಿದ ದುಡ್ಡಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ 60,000 ರೂ. ಮೌಲ್ಯದ ಬಟ್ಟೆ ಉಡುಗೊರೆ ನೀಡಿದ...

ಭಿಕ್ಷೆ ಬೇಡಿದ ದುಡ್ಡಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ 60,000 ರೂ. ಮೌಲ್ಯದ ಬಟ್ಟೆ ಉಡುಗೊರೆ ನೀಡಿದ ಮಂಗಳಮುಖಿ

ಭಿಕ್ಷೆ ಬೇಡಿ ಉಳಿತಾಯ ಮಾಡಿದ ದುಡ್ಡಲ್ಲಿ 60 ಸಾವಿರ ರೂ.ಮೌಲ್ಯದ ಬಟ್ಟೆಗಳಲ್ಲಿ ಮಂಗಳಮುಖಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಡುಗೊರೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎರಡು ಸರ್ಕಾರಿ ಶಾಲೆಯ 150 ಮಕ್ಕಳಿಗೆ ಮಂಗಳಮುಖಿ ರಾಜಮ್ಮ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಭಿಕ್ಷಾಟನೆ ಮಾಡಿ ಉಳಿತಾಯ ಮಾಡಿದ್ದ ಹಣದಲ್ಲಿ ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾರದಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ 60,000 ರೂ. ಮೌಲ್ಯದ ಟೀ ಶರ್ಟ್, ಪ್ಯಾಂಟ್ ಗಳನ್ನು ನೀಡಿದ್ದಾರೆ.

ಭಿಕ್ಷೆ ಬೇಡಿದ ಹಣದಲ್ಲಿ ಉಳಿತಾಯ ಮಾಡಿ ಬಡ ಮಕ್ಕಳಿಗೆ ಸಹಾಯ ಮಾಡಬೇಕೆಂಬ ಇಚ್ಛೆಯಿಂದ ಬಟ್ಟೆ ಕೊಡಿಸಿದ್ದಾಗಿ ಮಂಗಳಮುಖಿ ರಾಜಮ್ಮ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments