Thursday, May 14, 2026
Google search engine
Homeಬೆಂಗಳೂರುನಮ್ಮ ಮೆಟ್ರೋ ದರ ಶೇ.5ರಷ್ಟು ಹೆಚ್ಚಳಕ್ಕೆ ನಿರ್ಧಾರ: ರಾಜ್ಯ ಸರ್ಕಾರದ ಅನುಮತಿಸಿದರೆ ಜಾರಿ!

ನಮ್ಮ ಮೆಟ್ರೋ ದರ ಶೇ.5ರಷ್ಟು ಹೆಚ್ಚಳಕ್ಕೆ ನಿರ್ಧಾರ: ರಾಜ್ಯ ಸರ್ಕಾರದ ಅನುಮತಿಸಿದರೆ ಜಾರಿ!

ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇ5ರಷ್ಟು ಹೆಚ್ಚಿಸಲು ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ನಿರ್ಧರಿಸಿದ್ದು, ದರ ಏರಿಕೆ ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಮುಂದೆ ಇಡಲಾಗಿದೆ.

ರಾಜ್ಯ ಸರ್ಕಾರದ ಅನುಮತಿ ನೀಡಿದ ಕೂಡಲೇ ಮೆಟ್ರೋ ಪ್ರಯಾಣ ದರ ಏರಿಕೆ ಜಾರಿಯಾಗಲಿದೆ. ಆದರೆ ಕಳೆದ ವರ್ಷ ಮೆಟ್ರೋ ಟಿಕೆಟ್‌ ದರ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದ್ದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ಕುತೂಹಲ ಮೂಡಿದೆ.

ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಶೇ. 5 ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜ್ಯ ಸರ್ಕಾರದ ಅನುಮತಿಗೆ ಅಧಿಕಾರಿಗಳು ಸಾಹಸ ಪಡುತ್ತಿದ್ದಾರೆ. ಮತ್ತೆ ದರ ಏರಿಕೆಯ ವಿಚಾರ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಫೆಬ್ರವರಿ 9ರಂದು ಬಿಎಂಆರ್ಸಿಎಲ್ ಅಧಿಕಾರಿಗಳು ದುಪ್ಪಟ್ಟು ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಪ್ರಯಾಣಿಕರುಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರು ಮೆಟ್ರೊ ದರ ನಿಗದಿ ಸಮಿತಿ ಪುನರ್ ರಚಿಸಬೇಕು ಹಾಗೂ ಅಧಿಕಾರಿಗಳು ತಪ್ಪು ಲೆಕ್ಕ ಸರಿಪಡಿಸುವವರೆಗೆ ವಾರ್ಷಿಕ ದರ ಏರಿಕೆನ್ನು ತಡೆಹಿಡಿಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು.

ಮೊದಲು ತಪ್ಪು ಲೆಕ್ಕ ಕೊಟ್ಟು ಏರಿಕೆ ಮಾಡಿರುವ ದರವನ್ನು ಇಳಿಸಲಿ, ನಂತರ ಪ್ರತಿವರ್ಷ ಬೇಕಾದರೆ 5% ರಷ್ಟು ಏರಿಕೆ ಮಾಡಲಿ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದರು. ಆದರೆ ಇಷ್ಟೆಲ್ಲ ವಿರೋಧದ ನಡುವೆಯೂ ಮೆಟ್ರೋ ದರ ಏರಿಕೆಗೆ ಮುಂದಾಗಿದೆ.

ಮೆಟ್ರೋ ಟಿಕೆಟ್ ದರಗಳಲ್ಲಿ ಶೇ.71% ಹೆಚ್ಚಳ ಮಾಡಲಾಗಿತ್ತು. ಇದಾದ ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತರೆ, ಹೊಸ ಪರಿಷ್ಕರಣೆಯು ಪ್ರಯಾಣದ ದೂರವನ್ನು ಅವಲಂಬಿಸಿ ಕನಿಷ್ಠ 1 ರೂಪಾಯಿ ಮತ್ತು ಗರಿಷ್ಠ 5 ರೂಪಾಯಿಯ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments