Thursday, May 14, 2026
Google search engine
Homeರಾಜ್ಯಬಾಳೆಕಂದು ಕಡಿದು ಚಾಲನೆ ನಿಡಿದ ನಂಜರಾಜೇ ಅರಸ್: ಹಾಸನಾಂಬೆ ದೇವಿ ಬಾಗಿಲು ಓಪನ್

ಬಾಳೆಕಂದು ಕಡಿದು ಚಾಲನೆ ನಿಡಿದ ನಂಜರಾಜೇ ಅರಸ್: ಹಾಸನಾಂಬೆ ದೇವಿ ಬಾಗಿಲು ಓಪನ್

ಹಾಸನ ಅಧಿದೇವತೆ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮಂಗಳವಾದ್ಯಗಳೊಂದಿಗೆ ತೆರೆಯಲಾಗಿದೆ. ನಾಳೆಯಿಂದ ಸಾರ್ವಜನಿಕರಿಗೆ ದರ್ಶನ ದೊರೆಯಲಿದೆ.

ಶುಕ್ರವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು, ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಅರ್ಚಕರು ವಿಶೇಷ ಪೂಜೆ ನೆರವೇರಿಸಿ ದೇವಾಲಯದ ಒಳಗೆ ಪ್ರವೇಶಿಸಿದರು.

ಬಾಗಿಲು ತೆರೆಯುವ ವೇಳೆ ಗರ್ಭಗುಡಿಯಲ್ಲಿ ಕಳೆದ ವರ್ಷ ಹಚ್ಚಿದ ದೀಪ ಹಾಗೆಯೇ ಉರಿಯುತ್ತಿತ್ತು. ಇದನ್ನು ಕಂಡು ಗಣ್ಯರು ನಿಟ್ಟುಸಿರುಬಿಟ್ಟರು.

ಅರಸು ಮನೆತನದ ನಂಜರಾಜೇ ಅರಸ್ ಅವರು ಬಾಳೆಕಂದು ಕಡಿದು ಗರ್ಭಗುಡಿ ಬಾಗಿಲು ತೆರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದುರ. ಮುತ್ತೈದೆಯರು ಸಹ ಪೂಜಾ ಸಾಮಗ್ರಿಗಳೊಂದಿಗೆ ದೇವಾಲಯ ಪ್ರವೇಶಿಸಿ ಸಂಪ್ರದಾಯದ ಪೂಜೆ ವಿಧಿಗಳನ್ನು ಪೂರೈಸಿದರು.

ಗರ್ಭಗುಡಿ ತೆರೆದ ಬಳಿಕ ದೇವಿಯ ಆಲಯದ ಒಳಗಡೆ ಪೂಜೆ ಕಾರ್ಯ ಆರಂಭವಾಗಿದ್ದು, ಎರಡು ಕಡೆಯ ಪೂಜೆಗೆ ಅಗತ್ಯವಾದ ಪೂಜಾ ಸಾಮಗ್ರಿ, ದೇವಿಯ ಅಲಂಕಾರ ಒಡವೆಗಳು, ಹೂವು-ತಾಂಬೂಲ ಮೊದಲಾದವುಗಳೊಂದಿಗೆ ತಂಡ ಆಗಮಿಸಿತ್ತು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ, ಡಿಸಿ ಲತಾಕುಮಾರಿ, ಸ್ಥಳೀಯ ಶಾಸಕರು ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಅಕ್ಟೋಬರ್ 23ರವರೆಗೆ ಅಂದರೆ 15 ದಿನಗಳ ಕಾಲ ನಡೆಯುವ ಹಾಸನಾಂಬೆ ದರ್ಶನೋತ್ಸವದ ವಿವರಗಳು ಹೀಗಿವೆ.

9-10-2025: ಗುರುವಾರ: ಮಧ್ಯಾಹ್ನ 12.00 ರಿಂದ ಬಾಗಿಲು ತೆಗೆಯಲಾಗುವದು, ಸಾರ್ವಜನಿಕ ದರ್ಶನ ಇರುವುದಿಲ್ಲ.

10-10-2025: ಶುಕ್ರವಾರ: ಬೆಳಗ್ಗೆ 6.00 ರಿಂದ ಸಂಜೆ 7.00

11-10-2025: ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

12-10-2025: ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

13-10-2025: ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

14-10-2025: ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

15-10-2025: ಬುಧವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

16-10-2025: ಗುರುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00

17-10-2025: ಶುಕ್ರವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

18-10-2025: ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

19-10-2025: ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00

20-10-2025: ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

21-10-2025: ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00

22-10-2025: ಬುಧವಾರ: ಬೆಳಗ್ಗೆ 5.00 ರಿಂದ ಸಂಜೆ 7.00, ರಾತ್ರಿ 1.00 ರಿಂದ ಬೆಳಗ್ಗೆ 7.00

23-10-2025:  ಗುರುವಾರ: ಮಧ್ಯಾಹ್ನ 12.00 ಗಂಟೆಗೆ ಬಾಗಿಲು ಮುಚ್ಚಲಾಗುವುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments