Friday, May 15, 2026
Google search engine
Homeಕ್ರೀಡೆಬೈಕ್ ಅಪಘಾತದಲ್ಲಿ ರಾಷ್ಟ್ರೀಯ ಕಾರು ರೇಸಿಂಗ್ ಚಾಂಪಿಯನ್ ನಿಧನ

ಬೈಕ್ ಅಪಘಾತದಲ್ಲಿ ರಾಷ್ಟ್ರೀಯ ಕಾರು ರೇಸಿಂಗ್ ಚಾಂಪಿಯನ್ ನಿಧನ

ಕಾರು ರೇಸಿಂಗ್ ಚಾಂಪಿಯನ್ ರಂಜಿತ್ ಉಡುಪಿ ಜಿಲ್ಲೆಯ ಕುಂದಾಪುರ ಬಳಿ ಸೋಮವಾರ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

59 ವರ್ಷದ ರಾಷ್ಟ್ರೀಯ ಕಾರು ರೇಸಿಂಗ್ ಚಾಂಪಿಯನ್ ಮಂಗಳೂರು ಮೂಲದ ರಂಜಿತ್ ಬಲ್ಲಾಳ್ ಪ್ರಯಾಣಿಸುತ್ತಿದ್ದ ಬೈಕ್ ಗೆ ಸಿಲಿಂಡರ್ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು

ಕುಟುಂಬಸ್ಥರೊಂದಿಗೆ ಮೂರು ದಿನಗಳ ಹಿಂದೆ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ರಂಜಿತ್ ಸೋಮವಾರ ಬೈಕ್ ನಲ್ಲಿ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪ್ರತಿಭಾವಂತರಾಗಿದ್ದ ರಂಜಿತ್ ನೂರಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದರು. ಆಟೋ ಕ್ರಾಸ್ ಹಿಲ್ ಕ್ಲೈಂಬ್ ನಲ್ಲಿ ಅತ್ಯಂತ ವೇಗದ ಚಾಲಕರಾಗಿಯೂ ಹೊರಹೊಮ್ಮಿದ್ದರು. ಅಲ್ಲದೇ ಕಾರು ರೇಸಿಂಗ್ ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments