ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಿದ ವಿಧ್ವಂಸಕ ಕೃತ್ಯ ಎಸಗಿದ್ದ ಲಷ್ಕರೆ ಉಗ್ರನನ್ನು ಭಾರತಕ್ಕೆ ದಕ್ಷಿಣ ಆಫ್ರಿಕಾದ ರಾಂಡ್ವಾ ದೇಶ ಹಸ್ತಂತರಿಸಿದೆ.
ನಿಷೇಧಿತ ಲಷ್ಕರೆ ಇ ತೋಯ್ಬಾ ಸಂಘಟನೆಯ ಸಲ್ಮಾನ್ ರೆಹಮಾನ್ ಖಾನ್ ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಸಲ್ಮಾನ್ ಇದಕ್ಕಾಗಿ ಜೈಲು ಕೈದಿಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದ.
ರ್ವಾಂಡಾದ ರಾಜಧಾನಿ ಕಿಗಲಿಯಲ್ಲಿ ಸಲ್ಮಾನ್ ರೆಹಮಾನ್ ಖಾನ್ ನನ್ನು ಭಾರತದ ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾದಳ ಹಾಗೂ ರ್ವಾಂಡಾ ತನಿಖಾ ದಳಗಳು ಜಂಟಿ ಕಾರ್ಯಾಚರಣೆ ನಡೆಸಿ ಬುಧವಾರ ಬಂಧಿಸಿದ್ದವು.
ಗುರುವಾರ ಸಲ್ಮಾನ್ ನನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಂತರಿಸಲಾಗಿದ್ದು, ಭಾರತದ ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
೨೦೨೦ರಿಂದೀಚೆಗೆ ಎನ್ ಐಎ ಕ್ರಿಮಿನಲ್ ಗಳನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾದ ೧೭ನೇ ಪ್ರಕರಣವಾಗಿದೆ.