ಚೆನ್ನೈ: ಪಿಎಂಶ್ರೀ ಸಮಗ್ರ ಶಿಕ್ಷಾ ಯೋಜನೆಯಡಿ ರಾಜ್ಯಕ್ಕೆ ನೀಡಬೇಕಾದ 2,291 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕೇಂದ್ರ ವಿಳಂಬ ಮಾಡುತ್ತಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ ಮಾಡುವಂತೆ ಆದೇಶಿಸಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಇದೀಗ ಸುಪ್ರೀಂ ಕೋಟರ್್ ಕದ ತಟ್ಟಿದೆ.
ಕೇಂದ್ರದ ವಿರುದ್ಧ ಆಕ್ರೋಶ: ರಾಜ್ಯದ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಈಗಾಗಲೇ ಹಲವು ಬಾರಿ ಪ್ರಧಾನಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪತ್ರ ಬರೆದಿದ್ದಾರೆ. ಈ ಸಂಬಂಧ ತಮಿಳುನಾಡು ಸಂಸದರು ಮತ್ತು ಸಚಿವರು ಕೂಡ ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದು ತ್ರಿಭಾಷಾ ನೀತಿ ಅಳವಡಿಕೆ ಮಾಡಿಕೊಳ್ಳುವವರೆಗೆ ತನಾಡಿಗೆ ಸಮಗ್ರ ಶಿಕ್ಷಾ ಯೋಜನೆಯಡಿ ಬಾಕಿ ಇರುವ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದ್ದರು.
ಈ ಹೇಳಿಕೆಯು ತಮಿಳುನಾಡು ಸರ್ಕಾರದ ಆಕ್ರೋಶಕ್ಕೆ ಗುರಿಯಾಯಿತು. ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿದ ರಾಜ್ಯ ಸರ್ಕಾರ ಇದೀಗ ಸುಪ್ರೀಂ ಕೋಟರ್್ನ ಮೊರೆ ಹೋಗಿದೆ.
ಸುಪ್ರೀಂ ಕೋಟರ್್ಗೆ ಅಜರ್ಿ: ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ತಮಿಳುನಾಡು ಸಕರ್ಾರ, ತಮಿಳುನಾಡು ಸರ್ಕಾರದ ಪರವಾಗಿ ನಾವು ಕೇಂದ್ರ ಸರ್ಕಾರದ ವಿರುದ್ಧ ನಿನ್ನೆ ಪ್ರಕರಣ ದಾಖಲಿಸಿದ್ದೇವೆ.
ಸುಪ್ರೀಂಗೆ ಸಲ್ಲಿಕೆ ಮಾಡಿರುವ ಅಜರ್ಿಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಬೇಕಿರುವ ಬಾಕಿ ಹಣ ಸಂವಿಧಾನದ 131ನೇ ವಿಧಿ ಅಡಿ 2,291 ಕೋಟಿ ರೂ. ಬಿಡುಗಡೆಗೆ ಆದೇಶಿಸುವಂತೆ ಕೋರಲಾಗಿದೆ ಎಂದು ತಿಳಿಸಿದೆ.
ಮುಖ್ಯಮಂತ್ರಿಯ ಹೇಳಿಕೆ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಳೆದ ಶನಿವಾರ ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ, ಈ ವಿಷಯದ ಬಗ್ಗೆ ಸರ್ಕಾರ ಸುಪ್ರೀಂ ಕೋಟರ್್ ಮೊರೆ ಹೋಗುವುದಾಗಿ ತಿಳಿಸಿದ್ದರು.
ಏಪ್ರಿಲ್ನಲ್ಲಿ ರಾಜ್ಯಪಾಲ ಆರ್.ಎನ್. ರವಿ ವಿರುದ್ಧದ ಪ್ರಕರಣದಲ್ಲಿ ಮಾಡಿದಂತೆ ಅನುಕೂಲಕರ ತೀಪರ್ು ದೊರೆಯುವ ಭರವಸೆಯನ್ನು ವ್ಯಕ್ತಪಡಿಸಿದರು.
ಮಾಚರ್್ನಲ್ಲಿ ಶಿಕ್ಷಣದ ಸಂಸದೀಯ ಸ್ಥಾಯಿ ಸಮಿತಿಯು ನಿಧಿಯನ್ನು ತಕ್ಷಣ ಬಿಡುಗಡೆ ಮಾಡಲು ಶಿಫಾರಸ್ಸು ಮಾಡಿದ್ದರೂ, ಕೇಂದ್ರ ಸರ್ಕಾರವು ಪಟ್ಟುಬಿಡದೆ ಉಳಿದ ಎಲ್ಲಾ ಆಯ್ಕೆಗಳನ್ನು ನೀಡಿತ್ತು. ಆದರೂ ತಮಿಳುನಾಡು ಸರ್ಕಾರವು ಸಮಗ್ರ ಶಿಕ್ಷಾ ನಿಧಿಯನ್ನು ಬಿಡುಗಡೆ ಮಾಡಲು ಸುಪ್ರೀಂ ಕೋಟರ್್ಗೆ ಅಜರ್ಿ ಸಲ್ಲಿಸಲಿದೆ ಎಂದು ಸುದ್ದಿ ಪ್ರಕಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ರಾಜ್ಯದ ಬೇಡಿಕೆ: ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಣದ ಅಸಲನ್ನು 2025 ರ ಮೇ 1 ರಿಂದ ಆದೇಶ ಜಾರಿಯಾಗುವ ದಿನಾಂಕದೊಂದಿಗೆ ವಾಷರ್ಿಕ ಶೇ 6 ರಷ್ಟು ಬಡ್ಡಿದರದೊಂದಿಗೆ ಪಾವತಿಸುವಂತೆ ನಿದರ್ೆಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋಟರ್್ಗೆ ಮನವಿ ಮಾಡಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಪಿಎಂ ಶ್ರೀ ಶಾಲೆಗಳ ಯೋಜನೆಗಳನ್ನು ಕೇಂದ್ರವು ತಮಿಳುನಾಡಿನಲ್ಲಿ ಜಾರಿಗೆ ತರುವ ಒಪ್ಪಂದಕ್ಕೆ ಸಹಿ ಹಾಕದ ಹೊರತಾಗಿ ಅದನ್ನು ಒಟ್ಟುಗೂಡಿಸಬಾರದು ಎಂದೂ ಅಜರ್ಿಯಲ್ಲಿ ಮನವಿ ಮಾಡಲಾಗಿದೆ.
ಪಿಎಂ ಶ್ರೀ ಶಾಲೆಗಳು ಸಮಗ್ರ ಶಿಕ್ಷಾ ಯೋಜನೆಯಡಿ ಹಣ ಪಡೆಯಲು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸುವುದು ಸಂವಿಧಾನ ಮತ್ತು ಕಾನೂನು ಬಾಹಿರವಾಗಿದೆ.


