ರಾಜಸ್ಥಾನದ ಕೊಟಪುಟಿಲ್ ನಲ್ಲಿ 700 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದಿದ್ದ 3 ವರ್ಷದ ಬಾಲಕಿಯನ್ನು 10 ದಿನಗಳ ನಂತರ ರಕ್ಷಿಸಲಾಗಿದೆ.
ಸತತ 5 ಬಾರಿ ಪ್ರಯತ್ನಗಳು ವಿಫಲವಾದ ನಂತರ ಬಾಲಕಿ ಚೇತನಾಳನ್ನು ರಕ್ಷಿಸಲಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಕೊಟಪುಟಿಲ್ ಜಿಲ್ಲೆಯ ಕಿರಾತ್ ಪುರ್ ಗ್ರಾಮದ ಬದಿಯಾಲಿ ಕಿ ದಾನಿ ಎಂಬಲ್ಲಿ ಈ ಘಟನೆ ನಡೆದಿದ್ದು, ರಕ್ಷಣಾ ಕಾರ್ಯಾಚರಣೆಗೆ ಮಳೆ ಕೂಡ ಅಡ್ಡಿಪಡಿಸಿತ್ತು.
ಬೋರ್ ವೆಲ್ ಆರಂಭದಲ್ಲಿ 8 ಅಡಿ ಸುತ್ತಳತೆ ಇತ್ತು. ಕೊನೆಯ ಹಂತದಲ್ಲಿ ಮಗುವಿಗೆ ಆಹಾರ, ಉಸಿರಾಟಕ್ಕೆ ಗಾಳಿ ಪೂರೈಸಲು ಕೂಡ ಕಷ್ಟವಾಗಿತ್ತು. ಇದರಿಂದ ಮಗು ಬದುಕುವುದು ಅನುಮಾನವಾಗಿತ್ತು. ಆದರೆ ನಂತರ ಭದ್ರತಾ ಸಿಬ್ಬಂದಿ 12 ಅಡಿಗೆ ವಿಸ್ತರಿಸಿತು. ಹಲವು ಪ್ರಯತ್ನಗಳ ನಂತರ ದೆಹಲಿ ಮತ್ತು ಜೈಪುರ ಮೆಟ್ರೋದವರನ್ನು ಕರೆಸಲಾಯಿತು.