Sunday, November 9, 2025
Google search engine
Homeದೇಶಮೋದಿ ಕನಸಿನ ಯೋಜನೆಗೆ ಭಾರೀ ಹಿನ್ನಡೆ: ಶೇ.35ರಷ್ಟು ಜನಧನ ಖಾತೆ ನಿಷ್ಕ್ರಿಯ

ಮೋದಿ ಕನಸಿನ ಯೋಜನೆಗೆ ಭಾರೀ ಹಿನ್ನಡೆ: ಶೇ.35ರಷ್ಟು ಜನಧನ ಖಾತೆ ನಿಷ್ಕ್ರಿಯ

ನವದೆಹಲಿ: ಭಾರತದಲ್ಲಿ ಶೇ. 35ರಷ್ಟು ಜನ ತಮ್ಮ ಖಾತೆಗಳನ್ನು ಬಳಸದೆ ನಿಷ್ಟ್ರೀಯವಾಗಿರಿಸಿದ್ದಾರೆ ಎಂದು ವಿಶ್ವ ಬ್ಯಾಂಕ್‌ನ ಗ್ಲೋಬಲ್ ಫೈಂಡೆಕ್ಸ್ 2025 ವರದಿ ಬಹಿರಂಗಪಡಿಸಿದೆ.

ಇದು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ. 5ರಷ್ಟಿರುವ ನಿಷ್ಟ್ರೀಯ ಖಾತೆಗಳ ಸರಾಸರಿಗಿಂತ 7 ಪಟ್ಟು ಹೆಚ್ಚಾಗಿದೆ. ಈ ಖಾತೆಗಳ ನಿಷ್ಟ್ರೀಯತೆಗೆ ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಖಾತೆಗಳು ಒಂದು ಪ್ರಮುಖ ಕಾರಣವಾಗಿರಬಹುದು ಎಂದು ವರದಿ ತಿಳಿಸಿದೆ.

2014ರಲ್ಲಿ ಆರಂಭವಾದ ಜನ್ ಧನ್ ಯೋಜನೆಯು 2022ರ ಏಪ್ರಿಲ್‌ವೇಳೆಗೆ ಸುಮಾರು 45 ಕೋಟಿ ಭಾರತೀಯರನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಿತು. ಆದರೆ, ಈ ಖಾತೆಗಳಲ್ಲಿ ಗಣನೀಯ ಸಂಖ್ಯೆಯ ಖಾತೆಗಳು ಯಾವುದೇ ವಹಿವಾಟು ಇಲ್ಲದೆ ನಿಷ್ಕ್ರಿಯವಾಗಿವೆ.

ವಿಶ್ವ ಬ್ಯಾಂಕ್‌ನ ಪ್ರಕಾರ ಶೇ. 16ರಷ್ಟು ಖಾತೆದಾರರು, ಕಳೆದ 12 ತಿಂಗಳಲ್ಲಿ ತಮ್ಮ ಖಾತೆಗಳನ್ನು ಸಂಪೂರ್ಣವಾಗಿ ಬಳಸಿಲ್ಲ. ಇದು ಜಾಗತಿಕ ಸರಾಸರಿಯಾದ ಶೇ. 6ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

ನಿಷ್ಟ್ರೀಯ ಖಾತೆಗಳಿಗೆ ಕಾರಣಗಳಾಗಿ, ಸಾಕಷ್ಟು ಹಣದ ಕೊರತೆ, ಹಣಕಾಸು ಸಂಸ್ಥೆಗಳಿಗೆ ದೂರ, ಮತ್ತು ವೈಯಕ್ತಿಕ ಖಾತೆಯ ಅಗತ್ಯವಿಲ್ಲದಿರುವುದನ್ನು ವರದಿ ಗುರುತಿಸಿದೆ. ಇದರ ಜೊತೆಗೆ, ಭಾರತದಲ್ಲಿ ಕೇವಲ ಶೇ. 31.1 ರಷ್ಟು ಖಾತೆಗಳು ಡಿಜಿಟಲ್ ಸಂಪರ್ಕವನ್ನು ಹೊಂದಿವೆ, ಇದು ಡಿಜಿಟಲ್ ಹಣಕಾಸು ಸೇವೆಗಳ ಬೆಳವಣಿಗೆಗೆ ಇನ್ನೂ ದೊಡ್ಡ ಅವಕಾಶವಿದೆ ಎಂದು ಸೂಚಿಸುತ್ತದೆ.

2024ರಲ್ಲಿ ಶೇ. 89 ರಷ್ಟು ವಯಸ್ಕರು ಬ್ಯಾಂಕ್ ಅಥವಾ ಮೊಬೈಲ್ ಹಣ ಖಾತೆಯನ್ನು ಹೊಂದಿದ್ದಾರೆ, ಇದು 2011ರಲ್ಲಿ ಕೇವಲ ಶೇ. 35ರಷ್ಟಿತ್ತು.

ಜನ್ ಧನ್ ಯೋಜನೆ ಮತ್ತು ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಆದಾಗ್ಯೂ, ನಿಷ್ಕ್ರಿಯ ಖಾತೆಗಳ ಸಮಸ್ಯೆಯನ್ನು ಎದುರಿಸಲು ಜನರಲ್ಲಿ ಆರ್ಥಿಕ ಜಾಗೃತಿಯನ್ನು ಮೂಡಿಸುವುದು ಮತ್ತು ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ವರದಿ ಒತ್ತಿಹೇಳಿದೆ.

ನಿಷ್ಟ್ರೀಯ ಖಾತೆ ಎಂದರೆ ಏನು?

ನಿರ್ದಿಷ್ಟ ಅವಧಿಗೆ, ಸಾಮಾನ್ಯವಾಗಿ 12 ತಿಂಗಳವರೆಗೆ ಗ್ರಾಹಕರು ಯಾವುದೇ ವಹಿವಾಟು ನಡೆಸದೇ ಹೋದರೆ ಅಂತಹ ಖಾತೆಗಳನ್ನು ಬ್ಯಾಂಕುಗಳು ನಿಷ್ಟ್ರೀಯ ಎಂದು ವರ್ಗೀಕರಿಸುತ್ತವೆ.

‘ಭಾರತದಲ್ಲಿ ಖಾತೆಗಳ ನಿಷ್ಕಿçಯತೆ ಹೆಚ್ಚಿರುವುದಕ್ಕೆ ಒಂದು ಕಾರಣವೆಂದರೆ ಜನ್ ಧನ್ ಯೋಜನೆಯ ಭಾಗವಾಗಿ ಈ ಖಾತೆಗಳನ್ನು ತೆರೆದಿರುವುದೇ ಆಗಿದೆ. ಹಣಕಾಸು ಸಂಸ್ಥೆಗಳಲ್ಲಿ ನಂಬಿಕೆಯ ಕೊರತೆ ಮತ್ತು ಖಾತೆಯ ಅಗತ್ಯವಿಲ್ಲದಿರುವುದು ನಿಷ್ಕಿçಯ ಖಾತೆಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಸುಮಾರು ಶೇ. 40 ರಷ್ಟು ಜನರು ತಮ್ಮ ಬಳಿ ಖಾತೆಯನ್ನು ಬಳಸಲು ಸಾಕಷ್ಟು ಹಣವಿಲ್ಲ ಎಂದು ಹೇಳಿದ್ದಾರೆ ಮತ್ತು ಸುಮಾರು ಶೇ. 30ರಷ್ಟು ಜನರು ಸ್ವತಃ ಖಾತೆಯನ್ನು ಬಳಸಲು ಸುಲಭವಾಗಿಲ್ಲ ಎಂದು ದೂರಿದ್ದಾರೆ.
ಈ ವರದಿಯು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ 123 ಆರ್ಥಿಕತೆಗಳಲ್ಲಿ ಸುಮಾರು 1,28,000 ವಯಸ್ಕರ ಪ್ರತಿನಿಧಿ ಸಮೀಕ್ಷೆಯನ್ನು ಆಧರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments