ಹಿಸ್ಸಾರ್: ವೋಟ್ ಬ್ಯಾಂಕ್‌ಗಾಗಿ ಕರ್ನಾಟಕದ ಅಡಳಿತಾರೂಢ ಕಾಂಗ್ರೆಸ್ ಸರ್ಕಾರ ಮೂಲಭೂತವಾದಿಗಳಿಗೆ ಸಿವಿಲ್ ಗುತ್ತಿಗೆಗಳಲ್ಲಿ ಮೀಸಲಾತಿ ಕೊಡುವ ಮೂಲಕ ಎಸ್ಸಿ-ಎಸ್ಪಿ ವಿರೋಧಿ ಎಂಬುದನ್ನು ಸಾಬೀತು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದ ಹಿಸ್ಸಾರ್‌ನಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿ ಮಾಡಿದ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಮೋದಿ, ತನಗೆ ಯಾರು ವೋಟ್ ಹಾಕುತ್ತಾರೆ ಅವರ ಮೂಗಿಗೆ ತುಪ್ಪ ಸವರಿ ಸಮಾಧಾನ ಮಾಡುವುದು ಕಾಂಗ್ರೆಸ್‌ಗೆ ರಕ್ತಗತವಾಗಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ಅಲ್ಲಿನ ಸರ್ಕಾರ ಸಿವಿಲ್ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಹೊರಟಿದೆ. ಇದು ಸಂವಿಧಾನ ವಿರೋಧಿ ಎಂದು ಟೀಕಿಸಿದರು.
ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ನ ವೈರಸನ್ನು ಹರಡುತ್ತಿದೆ, ಪಕ್ಷ ಎಸ್‌ಸಿ ಮತ್ತು ಎಸ್‌ಟಿ ಸಮುದಾಯವನ್ನು ಎರಡನೇ ದರ್ಜೆಯ ನಾಗರಿಕರು ಎಂದು ಪರಿಗಣಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದರು.
ಕಾಂಗ್ರೆಸ್ ಸಂವಿಧಾನದ ವಿಧ್ವಂಸಕವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಸಮಾನತೆಯನ್ನು ತರಲು ಬಯಸಿದ್ದರು, ಆದರೆ ಕಾಂಗ್ರೆಸ್ ಮತ ಬ್ಯಾಂಕ್ ರಾಜಕೀಯದ ವೈರಸ್ ನ್ನು ಹರಡಿತು. ಬಾಬಾಸಾಹೇಬ್ ಪ್ರತಿಯೊಬ್ಬ ಬಡವರು, ಹಿಂದುಳಿದವರು ಘನತೆಯಿಂದ ಮತ್ತು ತಲೆ ಎತ್ತಿ ಬದುಕಲು ಸಾಧ್ಯವಾಗುತ್ತದೆ, ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಬಯಸಿದ್ದರು ಎಂದು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಂ ಮೂಲಭೂತ ವಾದಿಗಳಿಗೆ ಮೀಸಲಾತಿ ನೀಡಲು ಹೊರಟಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ನಿರ್ಲಕ್ಷಿಸಿ ಯಾವ ಪುರುಷಾರ್ಥಕ್ಕೆ ಮೀಸಲಾತಿ ನೀಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕ ಸರ್ಕಾರದ ತೀರ್ಮಾನದಿಂದಾಗಿ ಎಸ್ಸಿ-ಎಸ್ಟಿ, ಓಬಿಸಿವರ್ಗದವರಿಗೆ ಅನ್ಯಾಯವಾಗಿದೆ. ಇಷ್ಟಕ್ಕೆ ಸುಮ್ಮನಾಗದವರು ಈಗ ವಕ್ಸ್ ತಿದ್ದುಪಡಿ ಕಾಯ್ದೆಯು ಸಂವಿಧಾನಕ್ಕಿಂತಲೂ ಶ್ರೇಷ್ಠ ಎಂದು ಹೇಳಲು ಹೊರಟಿದ್ದಾರೆ ಎಂದರು. ಮುಸ್ಲಿಮರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಚುನಾವಣೆಗಳಲ್ಲಿ ಅದೇ ಸಮುದಾಯದ ಶೇ.50ರಷ್ಟು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸಾಮರ್ಥ್ಯ ಇದೆಯೇ ಎಂದು ಪ್ರಶ್ನಿಸಿದರು.
ನಿಮಗೆ ಮುಸ್ಲಿಮರ ಬಗ್ಗೆ ಅಷ್ಟೊಂದು ಕಳಕಳಿ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿ ಸಂಸತ್ ಗೆ ಆಯ್ಕೆ ಮಾಡಿಕೊಂಡು ಅಲ್ಲಿ ಬಂದು ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಬಹಿರಂಗ ಸವಾಲು ಹಾಕಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇ ಡ್ಕರ್ ಅವರ ಹೋರಾಟವು ನಮ್ಮ ಸರ್ಕಾರಕ್ಕೆ ಸ್ಫೂರ್ತಿಯಾಗಿದೆ. ಅವರ ನೀತಿಗಳು, ನಿರ್ಧಾರಗಳಿಂದ ಪ್ರೇರಣೆ ಪಡೆದುಕೊಂಡು ಅವುಗಳನ್ನು ಸರ್ಕಾರದಲ್ಲಿ ಅನುಷ್ಠಾನ ಮಾಡಿದ್ದೇವೆ. ಇದು ನಮ್ಮ ಬದ್ದತೆ ಎಂದು ಹೇಳಿದರು.
ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಗುರಾಣಿಯಾಗಿ ಬಳಸಿಕೊಂಡಿರುವುದಕ್ಕೆ ತುರ್ತು ಪರಿಸ್ಥಿತಿಯೇ ನಿದರ್ಶನ. ಕುರ್ಚಿ ಉಳಿಸಿಕೊಳ್ಳಲು ಅಂದು ಮಹಾನು ಭಾವರೊಬ್ಬರು ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ ಬಲವಂತ ವಾಗಿ ತುರ್ತು ಪರಿಸ್ಥಿತಿ ಹೇರಿದರು ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಸಂವಿಧಾನದ ಬಗ್ಗೆ ಅತಿಯಾಗಿ ಮಾತನಾಡುತ್ತದೆ. ಜಾತ್ಯತೀತತೆ, ನಾಗರಿಕ ಸಂಹಿತೆಯನ್ನು ಅವರು ಎಂದೂ ಪಾಲನೆ ಮಾಡಿಲ್ಲ ಜಾತಿ-ಧರ್ಮಗಳ ಮೇಲೆ ವಿಷು ಆದರೆ ಜನತೆ ಅವರಿಗೆ ಸರಿಯಾ ಹೇಳಿದರು. ಉತ್ತರಖಂಡ್‌ನ ನಾಗರಿಕ ಸಂಹಿತೆಯನ್ನು ಜಾ ಕಾಂಗ್ರೆಸ್ ವಿರೋಧಿಸುತ್ತಿದೆ. ಎಸ್ಸಿ-ಎಸ್ಟಿ, ಒಬಿಸಿ ಸಮುದಾಯ ಬಗ್ಗೆ ಕಾಂಗ್ರೆಸ್ ಎಂದಿಗೂ ಚಿವ ವ್ಯಕ್ತಪಡಿಸಿದರು.
ಬಾಬಾ ಸಾಹ ಮಾಡಿದ ಅವಮಾನವನ್ನು ನಾಜಿ ಎರಡು ಬಾರಿ ಅವರನ್ನು ಚುವ ಯಾರೆಂಬುದನ್ನು ನಾವು ಬಿಡಿ” ಸದಾಜಾಗರೂಕರಾಗಬೇಕು. ಕಾಳಿ ರಾಷ್ಟ್ರಪಿತ ಮಹಾತ್ಮಗಾಂಧಿಯವ ಕರೆ ಕೊಟ್ಟಿದ್ದರು ಎಂದು ಹೇಳಿದರು.