Friday, April 25, 2025
Google search engine
Homeದೇಶಎಐಎಡಿಎಂಕೆ ಮೈತ್ರಿ ಬೆನ್ನಲ್ಲೇ ತಮಿಳುನಾಡು ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ

ಎಐಎಡಿಎಂಕೆ ಮೈತ್ರಿ ಬೆನ್ನಲ್ಲೇ ತಮಿಳುನಾಡು ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ

ಚೆನ್ನೈ:ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ.

ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಏಕೆಂದರೆ ಶುಕ್ರವಾರ ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ ಏಕೈಕ ವ್ಯಕ್ತಿ ಅವರಾದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಬಿಜೆಪಿಯ ಇತರ ನಾಯಕರು ಅದನ್ನು ಅನುಮೋದಿಸಿದರು. ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಅಧಿಕೃತ ಘೋಷಣೆಯನ್ನು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಿಂದ ಮಾಡಲಾಗುವುದು.

ಅಣ್ಣಾಮಲೈ ತಾವು ಬಿಜೆಪಿ ರಾಜ್ಯಾಧ್ಯಕ್ಷನ ರೇಸ್​ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದರಿಂದ ಈ ಹುದ್ದೆಗೆ ವನತಿ ಶ್ರೀನಿವಾಸನ್ ಮತ್ತು ತಮಿಳಿಸೈ ಸೌಂದರರಾಜನ್ ಅವರಂತಹ ಹೆಸರುಗಳ ಬಗ್ಗೆ ಊಹಾಪೋಹಗಳಿದ್ದರೂ ಅಂತಿಮವಾಗಿ ನಾಗೇಂದ್ರನ್ ಆಯ್ಕೆಯಾಗಿದ್ದಾರೆ.

ತಿರುನಲ್ವೇಲಿಯ ಪ್ರಮುಖ ತೇವರ್ ಸಮುದಾಯದ ನಾಯಕ ಮತ್ತು ಬಿಜೆಪಿಯ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಡ ಒಲವು ಹೊಂದಿತ್ತು ಎಂದು ಬಹು ಮೂಲಗಳು ದೃಢಪಡಿಸಿವೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರ ನೋಂದಣಿಗೆ ಚುನಾವಣೆ ಘೋಷಣೆಯಾಗಿತ್ತು. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದರೆ, ಏಪ್ರಿಲ್ 12ರಂದು ಚುನಾವಣೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಬಿಜೆಪಿಯಿಂದ ನೈನಾರ್ ನಾಗೇಂದ್ರನ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ನಾಗೇಂದ್ರನ್ ಅವರೊಂದಿಗೆ ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ಪ್ರಸ್ತುತ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡ ಕಮಲಾಲಯಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ವೇಳೆ ಜೊತೆಗಿದ್ದರು. ಆ ನಿಟ್ಟಿನಲ್ಲಿ ಇದೀಗ ಅಣ್ಣಾಮಲೈ ನೈನಾರ್ ನಾಗೇಂದ್ರನ್ ಅವರನ್ನು ನಾಮನಿರ್ದೇಶನ ಮಾಡಲು ನೈನಾರ್ ನಾಗೇಂದ್ರನ್ ನಾಮಪತ್ರ ಸಲ್ಲಿಸಿದ್ದಾರೆ. ಅಣ್ಣಾಮಲೈ ಮಾತ್ರವಲ್ಲ ಎಲ್. ಮುರುಗನ್, ಎಚ್. ಕಿಂಗ್, ರಾಧಾಕೃಷ್ಣನ್, ವನತಿ ಶ್ರೀನಿವಾಸನ್ ಮುಂತಾದವರು ಕೂಡ ನೈನಾರ್ ನಾಗೇಂದ್ರನ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ ಆಗಮಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಈಗಾಗಲೇ ಸಾಕಷ್ಟು ಉತ್ಸಾಹ ಮೂಡಿದೆ. ಚೆನ್ನೈನ ಗಿಂಡಿಯ ಐಟಿಸಿ ಗ್ರ್ಯಾಂಡ್ ಚೋಳದಲ್ಲಿ ನಡೆಯಲಿರುವ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಈ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಆರಂಭವಾಗಬೇಕಿತ್ತು, ಆದರೆ ಸುಮಾರು 3 ಗಂಟೆಗಳ ಕಾಲ ವಿಳಂಬವಾಗಿದೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಲಾದ ಎಲ್ಇಡಿ ಪರದೆಯ ಮೇಲೆ ಪ್ರಸಾರವಾದ ಬ್ಯಾನರ್‌ನಲ್ಲಿ ನೈನಾರ್ ನಾಗೇಂದ್ರನ್ ಅವರ ಛಾಯಾಚಿತ್ರವೂ ಇತ್ತು. ಆದ್ದರಿಂದ, ತಮಿಳುನಾಡು ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿತ್ತು.

ನಾಗೇಂದ್ರನ್ ಹಿನ್ನೆಲೆ:

ನೈನಾರ್ ನಾಗೇಂದ್ರನ್ ಅವರು ಎಐಎಡಿಎಂಕೆಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2017ರಲ್ಲಿ ಎಐಎಡಿಎಂಕೆಯಿಂದ ಹೊರಬಂದು ಬಿಜೆಪಿ ಸೇರಿದರು. 2019ರಲ್ಲಿ ಅವರು ಬಿಜೆಪಿ ಪರವಾಗಿ ರಾಮನಾಥಪುರಂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 2021ರ ವಿಧಾನಸಭಾ ಚುನಾವಣೆಯಲ್ಲಿ ತಿರುನಲ್ವೇಲಿ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಗೆದ್ದರು. ಶಾಸಕರಾಗಿದ್ದರೂ 2024ರ ಲೋಕಸಭಾ ಚುನಾವಣೆಯಲ್ಲಿ ತಿರುನಲ್ವೇಲಿ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಅಲ್ಲಿ ಅವರು ಗೆಲ್ಲಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments