Monday, May 11, 2026
Home ದೇಶ ಕಾರಿನ ಟಯರ್ ಸ್ಫೋಟಗೊಂಡ ಮಹಿಳೆ ಸಜೀವದಹನ

ಕಾರಿನ ಟಯರ್ ಸ್ಫೋಟಗೊಂಡ ಮಹಿಳೆ ಸಜೀವದಹನ

by Vahini
0 comments
car blast

ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡ ಪರಿಣಾಮ ಮಹಿಳೆ ಸಜೀವದಹನಗೊಂಡ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.

ಜಲಗಾಂವ್‌ ನಿಂದ ಛತ್ರಪತಿ ಸಂಭಾಜಿ ನಗರದ ದಾರಿಯಲ್ಲಿ ಮಂಗಳವಾರ ಈ ದುರಂತ ಸಂಭವಿಸಿದೆ.

ಟಯರ್‌ ಸ್ಫೋಟಗೊಂಡು ಕಾರಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಜನರು ಸ್ಥಳಕ್ಕೆ ಧಾವಿಸಿ ಕಾರಿನ ಒಳಗಿದ್ದವರ ರಕ್ಷಣೆಗಾಗಿ ಕಾರಿನ ಕಿಟಕಿಗಳನ್ನು ಒಡೆದು ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿಯೇ ಬೆಂಕಿ ಇದ್ದಕ್ಕಿದ್ದಂತೆ ಹೆಚ್ಚಾಗಿ ಕಾರಿನಲ್ಲಿದ್ದ ಮಹಿಳೆ ಸುಟ್ಟು ಕರಕಲಾಗಿದ್ದಾರೆ.

ಹೆದ್ದಾರಿಯ ಜಂಕ್ಷನ್ ಬಳಿ ಕಾರು ಹೊತ್ತಿ ಉರಿಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿಗೆ ಬೆಂಕಿ ಬಿದ್ದ ಮಾಹಿತಿ ತಿಳಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಿ ಒಳಗಿದ್ದ ಮಹಿಳೆ ಸಜೀವ ದಹನಗೊಂಡಿದ್ದಾರೆ.

ಕಾರಿನಲ್ಲಿ ಬೇರೆ ಪ್ರಯಾಣಿಕರು ಇದ್ದರೆ ಇಲ್ಲವೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign