Wednesday, May 13, 2026
Google search engine
Homeಆರೋಗ್ಯಓಯಸಿಸ್ ಫರ್ಟಿಲಿಟಿಯಿಂದ 'ಓಯಸಿಸ್ ಸಾರಥಿ' ಆ್ಯಪ್ ಬಿಡುಗಡೆ

ಓಯಸಿಸ್ ಫರ್ಟಿಲಿಟಿಯಿಂದ ‘ಓಯಸಿಸ್ ಸಾರಥಿ’ ಆ್ಯಪ್ ಬಿಡುಗಡೆ

ಬೆಂಗಳೂರು: ಸಂತಾನೋತ್ಪತ್ತಿ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿನ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ‘ಓಯಸಿಸ್ ಫರ್ಟಿಲಿಟಿ’, ಪೋಷಕರಾಗುವ ಹಂಬಲದಲ್ಲಿರುವ ದಂಪತಿಗಳಿಗಾಗಿ ವಿಶ್ವಾಸಾರ್ಹ ನೆರವು, ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ‘ಓಯಸಿಸ್ ಸಾರಥಿ’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

ಬಂಜೆತನದ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳು ಮತ್ತು ದಂಪತಿಗಳಿಗೆ ಅವರ ಚಿಕಿತ್ಸಾ ಪಯಣದಲ್ಲಿ ವಿಶ್ವಾಸಾರ್ಹ ವೈದ್ಯಕೀಯ ಮಾಹಿತಿ, ತಜ್ಞರ ಮಾರ್ಗದರ್ಶನ ಹಾಗೂ ರೋಗಿಗಳ ಆರೈಕೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.

ವೇದಿಕೆಯು ರೋಗಿಗಳು ಮತ್ತು ಅವರ ಚಿಕಿತ್ಸಾ ತಂಡದ ನಡುವೆ ನಿರಂತರ ಸಂಪರ್ಕ ಕಲ್ಪಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಹೆಸರೇ ಸೂಚಿಸುವಂತೆ, ಈ ಆ್ಯಪ್ ಪೋಷಕರಾಗುವ ಹಾದಿಯಲ್ಲಿ ಒಬ್ಬ ವಿಶ್ವಾಸಾರ್ಹ “ಸಾರಥಿ”ಯಂತೆ ಅಥವಾ ಸಾಥಿಯಂತೆ ಕಾರ್ಯನಿರ್ವಹಿಸಲಿದೆ.

ಬಂಜೆತನದ ಕಾರಣಗಳು, ಲಕ್ಷಣಗಳು ಮತ್ತು ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಫೀಚರ್ ಗಳು ಇದರಲ್ಲಿವೆ. ಬಳಕೆದಾರರು ತಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ.

ಓವುಲೇಷನ್ ಟ್ರ್ಯಾಕರ್ ಮತ್ತು ಫರ್ಟಿಲಿಟಿ ಹೆಲ್ತ್ ಚೆಕ್‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments