ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಭಾರತ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯ ಮೂರು ಪಡೆಗಳು ದಾಳಿ ನಡೆಸಿದೆ. ಇದು 1971ರ ನಂತರ ನಡೆಸಿದ ಮೊದಲ ದಾಳಿ ಇದಾಗಿದೆ.
ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ನರಮೇಧ ನಡೆದ ಎರಡು ವಾರದಲ್ಲೇ ಭಾರತ ಭೀಕರ ದಾಳಿ ನಡೆಸುವ ಮೂಲಕ ಪ್ರತೀಕಾರ ಕ್ರಮ ಕೈಗೊಂಡಿದೆ.
ಬುಧವಾರ ರಾತ್ರಿ 1.44ರ ಸುಮಾರಿಗೆ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, 70ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿದ್ದು, ಮೃತಪಟ್ಟವರು ಬಹುತೇಕ ಉಗ್ರರ ಕುಟುಂಬಗಳು ಹಾಗೂ ಕೆಳ ಹಂತದ ಉಗ್ರರು ಎಂದು ಅಂದಾಜಿಸಲಾಗಿದೆ.
ಪಾಕಿಸ್ತಾನ ಆಕ್ರಮಿತ ಪ್ರದೇಶವಾದ ಜಮ್ಮು ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದ್ದು, ಉಗ್ರರ ಮೂಲಭೂತ ಸೌಕರ್ಯದ ಮೇಲೆ ದಾಳಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಮೊದಲ ಬಾರಿ ಭಾರತ ವಾಯುಪಡೆ, ನೌಕಾಪಡೆ ಮತ್ತು ಭೂ ಸೇನೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಇದಾಗಿದ್ದು, ಕಮಿಕಾಜ್ ಡ್ರೋಣ್ ಗಳನ್ನು ದಾಳಿಗೆ ಬಳಸಲಾಗಿದೆ.



