ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಭಾರತೀಯ ವಾಯುಪಡೆ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ.
ಭಾರತದ ಗಡಿಯೊಳಗೆ ಪ್ರವೇಶಿಸಲು ಯತ್ನಿಸಿದ ಪಾಕಿಸ್ತಾನದ ಜೆಫ್-17 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದೆ.
ಚೀನಾ ಅಭಿವೃದ್ಧಿಪಡಿಸಿದ ಜೆಎಫ್-17 ಯುದ್ಧ ವಿಮಾನ ಜಮ್ಮು ಕಾಶ್ಮೀರದ ಪುಲ್ವಾಮ ಬಳಿ ಭಾರತೀಯ ವಾಯು ಪ್ರದೇಶದೊಳಗೆ ಪ್ರವೇಶಿಸಿದ್ದರಿಂದ ಹೊಡೆದು ಉರುಳಿಸಲಾಗಿದೆ.



