ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ 600 ದಾಟಿದ್ದು, ಇನ್ನಷ್ಟು ಹೆಚ್ಚುವ ಭೀತಿ ಇದೆ.
ಆಫ್ಗಾನಿಸ್ತಾನದ ಉತ್ತರ ಭಾಗದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದ್ದು, 622 ಮಂದಿ ಅಸುನೀಗಿದ್ದಾರೆ.
ಭೂಕಂಪನದಿಂದ 1500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹೆಲಿಕಾಫ್ಡರ್ ಮೂಲಕ ರಕ್ಷಣಾ ಕಾರ್ಯಚರಣೆ ನಡೆದಿದೆ.
ಭೂಕಂಪನ ಸಂಭವಿಸಿದ ಪ್ರದೇಶದಲ್ಲಿ ತಾಲಿಬಾನ್ ಹೆಚ್ಚು ಪ್ರಾಬಲ್ಯ ಹೊಂದಿದ್ದು, ತಾಲಿಬಾನ್ ಉಗ್ರರೂ ಸಾಕಷ್ಡು ಸಂಖ್ಯೆಯಲ್ಲಿ ಮೃತಪಟ್ಡಿದ್ದಾರೆ ಎಂದು ಹೇಳಲಾಗಿದೆ.



