Tuesday, August 18, 2026
Google search engine
Homeತಾಜಾ ಸುದ್ದಿಭೂಕಂಪನದಿಂದ ಕುಸಿದ 60 ಮಸೀದಿ; ನಮಾಜ್ ಮಾಡುತ್ತಿದ್ದ 700 ಮುಸ್ಲಿಮರು ದುರ್ಮರಣ

ಭೂಕಂಪನದಿಂದ ಕುಸಿದ 60 ಮಸೀದಿ; ನಮಾಜ್ ಮಾಡುತ್ತಿದ್ದ 700 ಮುಸ್ಲಿಮರು ದುರ್ಮರಣ

ಮ್ಯಾನ್ಮರ್ ನಲ್ಲಿ ಸಂಭವಿಸಿದ ಭೂಕಂಪನದಲ್ಲಿ 60 ಮಸೀದಿಗಳು ಧರೆಗುರುಳಿದ್ದು, ಶುಕ್ರವಾರದ ನಮಾಜ್ ಮಾಡುತ್ತಿದ್ದ 700ಕ್ಕೂ ಹೆಚ್ಚು ಮುಸ್ಲಿಮರು ಮೃತಪಟ್ಟಿದ್ದಾರೆ.

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ 7.7 ತೀವ್ರತೆಯ ಭೂಕಂಪನದಿಂದ 60 ಮಸೀದಿಗಳು ಹಾನಿ ಅಥವಾ ಸಂಪೂರ್ಣ ಧರೆಗುರುಳಿವೆ ಎಂದು ತಿಳಿಸಿದ್ದಾರೆ.

ಮ್ಯಾನ್ಮರ್ ನಲ್ಲಿ ಸಂಭವಿಸಿದ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇದರಲ್ಲಿ ಮಸೀದಿ ಕುಸಿದುಬಿದ್ದು ಮೃತಪಟ್ಟ 700 ಮಂದಿಯೂ ಸೇರಿದ್ದಾರೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

ಶುಕ್ರವಾರದ ವೇಳೆ ಮಸೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಸೇರಿ ನಮಾಜ್ ಸಲ್ಲಿಸುತ್ತಿದ್ದಾಗ ಭೂಕಂಪನ ಸಂಭವಿಸಿದ್ದು, ಮಸೀದಿಯ ಗೋಪುರಗಳು ಕುಸಿದು ಬೀಳುತ್ತಿದ್ದು, ಅಲ್ಲದೇ ಮಸೀದಿಯಿಂದ ಜನರು ಹೊರಗೆ ಓಡಿ ಬರುತ್ತಿರುವ ಹಲವಾರು ವೀಡಿಯೊಗಳು ಹರಿದಾಡುತ್ತಿವೆ.

ಮ್ಯಾನ್ಮರ್ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 1700 ಮಂದಿ ಮೃತಪಟ್ಟಿದ್ದು, 300 ಮಂದಿ ನಾಪತ್ತೆಯಾಗಿದ್ದಾರೆ. 3400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments