Sunday, June 28, 2026
Google search engine
Homeಬೆಂಗಳೂರುಮೆಟ್ರೋ ರೈಲಿನಲ್ಲಿ ಯುವತಿಯರ ಫೋಟೊ ತೆಗೆಯುತ್ತಿದ್ದ ಟೆಕ್ಕಿ: ಮೊಬೈಲ್ ನಲ್ಲಿ 50 ಯುವತಿಯರ ಪೋಟೋ, ವಿಡಿಯೋ...

ಮೆಟ್ರೋ ರೈಲಿನಲ್ಲಿ ಯುವತಿಯರ ಫೋಟೊ ತೆಗೆಯುತ್ತಿದ್ದ ಟೆಕ್ಕಿ: ಮೊಬೈಲ್ ನಲ್ಲಿ 50 ಯುವತಿಯರ ಪೋಟೋ, ವಿಡಿಯೋ ಪತ್ತೆ!

ಬೆಂಗಳೂರು: ಮೆಟ್ರೋ ರೈಲಿನಲ್ಲಿ ಯುವತಿಯರ ಅಂಗಾಗಗಳ ವಿಡಿಯೋ ಚಿತ್ರೀಕರಿಸಿ ಫೋಟೋ ತೆಗೆಯುತ್ತಿದ್ದ ಕಾಮುಕ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್ಗಳು ಹಿಡಿದು ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸ್ ವಶಕ್ಕೆ ನೀಡಲಾದ ಆರೋಪಿ ಸಾಫ್ಟ್ ವೇರ್ ಇಂಜಿನಿಯರ್ ಮಹೇಶ್ ಗೆ ಬಿಎಂಆರ್ಸಿಎಲ್‌ 5 ಸಾವಿರ ರೂ. ದಂಡ ವಿಧಿಸಿದೆ.

ಆರೋಪಿಯು ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಗಳ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ. ಆರೋಪಿಯ ಮೊಬೈಲ್ನಲ್ಲಿ ಸುಮಾರು 50 ಯುವತಿಯರ ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿವೆ.

ಕಳೆದ ಡಿ.25 ರಂದು ಬೆಳಿಗ್ಗೆ 9 ಗಂಟೆಗೆ ಯುವತಿಯೊಬ್ಬಳು ಮೆಜೆಸ್ಟಿಕ್ನಿಂದ ಜೆಪಿ ನಗರ ಮೆಟ್ರೋ ಸ್ಟೇಷನ್ಗೆ ಹೋಗ್ತಿದ್ದಳು. ವೇಳೆ ಯುವಕ, ಯುವತಿಯ ಖಾಸಗಿ ಅಂಗಾಂಗಗಳ ವಿಡಿಯೋ ತೆಗೆಯುತ್ತಿದ್ದನ್ನು ಗಮನಿಸಿ ಆತನಿಗೆ ಹೊಡೆದಿದ್ದಾಳೆ.

ವೇಳೆ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗ್ತಿದ್ದ ಇಬ್ಬರು ಸೆಕ್ಯೂರಿಟಿಗಳು ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ. ವೇಳೆ ಮಹೇಶ್ ಕೃತ್ಯ ಬೆಳಕಿಗೆ ಬಂದಿದೆ.

ಜಯನಗರ ಮೆಟ್ರೋ ನಿಲ್ದಾಣದಲ್ಲಿ ಆತನನ್ನು ರೈಲಿನಿಂದ ಕೆಳಗಿಳಿಸಿ, ಮೊಬೈಲ್ ಪರಿಶೀಲನೆ ನಡೆಸಿದಾಗ ವಿಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ. ಆತನನ್ನು ಜಯನಗರ ಪೊಲೀಸ ವಶಕ್ಕೆ ನೀಡಲಾಗಿದೆ.

ಕರ್ತವ್ಯದಲ್ಲಿ ಇಲ್ಲದಿದ್ದರೂ ಯುವತಿಯ ಸಹಾಯಕ್ಕೆ ಧಾವಿಸಿದ ಮೆಟ್ರೋ ಸೆಕ್ಯುರಿಟಿ ಗಾರ್ಡ್ ಸುಜೀತ್ ಹಾಗೂ ಎಸ್.ಜಿ ರಾಮ್ ಬಹದ್ದೂರ್ ಅವರನ್ನು ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments