Saturday, August 15, 2026
Google search engine
Homeದೇಶನಾಯಿ ಕಚ್ಚಿದ ಎಮ್ಮೆ ಹಾಲಿನ ಮೊಸರು ಸೇವಿಸಿದ 200 ಮಂದಿಗೆ ರೇಬಿಸ್ ಭೀತಿ!

ನಾಯಿ ಕಚ್ಚಿದ ಎಮ್ಮೆ ಹಾಲಿನ ಮೊಸರು ಸೇವಿಸಿದ 200 ಮಂದಿಗೆ ರೇಬಿಸ್ ಭೀತಿ!

ನಾಯಿ ಕಚ್ಚಿದ ಎಮ್ಮೆಯಿಂದ ತಯಾರಿಸಿದ ಮೊಸರು ಸೇವಿಸಿದ 200ಕ್ಕೂ ಹೆಚ್ಚು ಮಂದಿಗೆ ರೇಬಿಸ್ ರೋಗದ ಭೀತಿ ಆವರಿಸಿದ ಆಘಾತಕಾರಿ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬುಡೌನ್‌ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ಡಿಸೆಂಬರ್ 23ರಂದು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಯಿ ಕಚ್ಚಿದ್ದ ಎಮ್ಮೆ ಮೃತಪಟ್ಟಿದೆ. ಆದರೆ ಸಾವಿಗೂ ಮುನ್ನ ಎಮ್ಮೆಯಿಂದ ಸಂಗ್ರಹಿಸಿದ ಹಾಲಿನಿಂದ ಸಿದ್ಧಪಡಿಸಲಾಗಿದ್ದ ಮೊಸರು ಸಾರ್ವಜನಿಕವಾಗಿ ಬಳಸಲಾಗಿತ್ತು.

ಸೆಂಬರ್ 26ರಂದು ಎಮ್ಮೆ ಮೃತಪಟ್ಟಿದ್ದು, ಡಿಸೆಂಬರ್ 23ರಂದು ನಡೆದ ವ್ಯಕ್ತಿಯೊಬ್ಬರ ಪುಣ್ಯತಿಥಿ ವೇಳೆ ಊಟಕ್ಕೆ ನಾಯಿ ಕಡಿತದಿಂದ ಮೃತಪಟ್ಟ ಎಮ್ಮೆಯಿಂದ ಸಿದ್ಧಪಡಿಸಲಾದ ಮೊಸರನ್ನು ವಿತರಿಸಲಾಗಿತ್ತು.

=ಎಮ್ಮೆಯ ಮೊಸರು ಸೇವಿಸಿದ ಗ್ರಾಮಸ್ಥರು ಇದೀಗ ರೇಬಿಸ್ ರೋಗದ ಭೀತಿಗೆ ಸಿಲುಕಿದ್ದು, ಮುಂಜಾಗೃತಾ ಕ್ರಮವಾಗಿ ರೇಬಿಸ್ ನಿರೋಧಕ ಲಸಿಕೆ ಪಡೆದಿದ್ದಾರೆ.

ಹಾಲನ್ನು ಕುದಿಸಿದ ನಂತರ ರೇಬೀಸ್ ಅಪಾಯ ಇರುವುದಿಲ್ಲ. ಆದರೆ ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟುವ ಸಲುವಾಗಿ ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡುತ್ತಿದ್ದೇವೆ. ಯಾವುದೇ ವದಂತಿಗಳನ್ನು ಹರಡದಂತೆ ಗ್ರಾಮದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಯಿ ಕಚ್ಚಿದ್ದರಿಂದ ಎಮ್ಮೆ ಅನಾರೋಗ್ಯಕ್ಕೆ ಒಳಗಾಗಿತ್ತು. ಬಳಿಕ ಅದು ಮೃತಪಟ್ಟಿತ್ತು. ಪುಣ್ಯತಿಥಿ ಸಮಾರಂಭದಲ್ಲಿ ಊಟಕ್ಕೆ ಬಳಸಿದ್ದ ಮೊಸರನ್ನು ಅದೇ ಎಮ್ಮೆಯ ಹಾಲಿನಿಂದ ತಯಾರಿಸಲಾಗಿತ್ತು. ಇದರಿಂದ ಸೇವಿಸಿದವರಿಗೆಲ್ಲ ಸೋಂಕಿನ ಭೀತಿ ಆವರಿಸಿಕೊಂಡಿದ್ದು, ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದೇವೆ ಎಂದು ಗ್ರಾಮಸ್ಥ ಧರ್ಮಪಾಲ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments