Monday, June 15, 2026
Google search engine
Homeದೇಶಟೋಲ್‌ ನಲ್ಲಿ 33 ಗಂಟೆ ನಿಂತ 1 ಲಕ್ಷ ವಾಹನಗಳು: 5 ಕೋಟಿ ಮರುಪಾವತಿ!

ಟೋಲ್‌ ನಲ್ಲಿ 33 ಗಂಟೆ ನಿಂತ 1 ಲಕ್ಷ ವಾಹನಗಳು: 5 ಕೋಟಿ ಮರುಪಾವತಿ!

ಮುಂಬೈ- ಪುಣೆ ಎಕ್ಸ್‌ ಪ್ರೆಸ್‌ ವೇನಲ್ಲಿ ಸುಮಾರು 33 ಗಂಟೆಗಳ ಕಾಲ ಸುಮಾರು ಟ್ರಾಫಿಕ್‌ ಜಾಮ್‌ ನಲ್ಲಿ ಸಿಲುಕಿಕೊಂಡಿದ್ದ 1 ಲಕ್ಷ ವಾಹನಗಳಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಕಾರ್ಪೊರೇಷನ್‌ 5.16 ಕೋಟಿ ಹಣವನ್ನು ಮರುಪಾವತಿಸಿದೆ.

ಫೆಬ್ರವರಿ ೩ರಂದು ಕೊಪ್ಪೊಲಿ ಬಳಿ ಗ್ಯಾಸ್‌ ಟ್ಯಾಂಕರ್‌ ಮಗುಚಿಬಿದ್ದ ಕಾರಣ ಸಂಚಾರಿ ದಟ್ಟಣೆ ಉಂಟಾಗಿದ್ದು, ಇದರಿಂದ ಎಕ್ಸ್‌ ಪ್ರೆಸ್‌ ವೇನಲ್ಲಿ ವಾಹನಗಳು ಸುಮಾರು 33 ಗಂಟೆಗಳ ಕಾಲ ಸಿಲುಕಿಕೊಂಡಿದ್ದವು. ಹಲವು ಕಿಲೋ ಮೀಟರ್‌ ಗಟ್ಟಲೆ ವಾಹನಗಳು ನಿಂತಿದ್ದರಿಂದ ಸವಾರರು ನೀರು, ದಣಿವು, ಬಿಸಿಲಿನ ಝಳಕ್ಕೆ ತತ್ತರಿಸಿದ್ದರು.

ಸಂಚಾರಿ ದಟ್ಟಣೆ ಕಾರಣ ಕೂಡಲೇ ಟೋಲ್‌ ಸಂಗ್ರಹ ನಿಲ್ಲಿಸಲಾಯಿತಾದರೂ ಹಲವಾರು ವಾಹನಗಳು ಫಾಸ್ಟ್‌ ಟ್ಯಾಗ್‌ ಮೂಲಕ ಟೋಲ್‌ ಶುಲ್ಕ ಪಾವತಿಸಿದ್ದರು. ಫಾಸ್ಟ್‌ ಟ್ಯಾಗ್‌ ನಿಂತ ಪಾವತಿಸಲಾದ ವಾಹನಗಳ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗಿದ್ದು, ಇದಕ್ಕಾಗಿ ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ಪ್ರಾಧಿಕಾರ 5.16 ಕೋಟಿ ರೂ. ವೆಚ್ಚ ಮಾಡಬೇಕಾಯಿತು.

ಫಾಸ್ಟ್‌ ಟ್ಯಾಗ್‌ ನಲ್ಲಿ ಕಡಿತವಾಗಿದ್ದ ಶುಲ್ಕವನ್ನು ಸ್ವಯಂ ಚಾಲಿತವಾಗಿ ಮರು ಪಾವತಿ ಮಾಡುವಂತೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ವಾಹನ ಮಾಲೀಕರಿಗೂ ಹಣ ಮರು ಸಂದಾಯವಾಗಿದೆ ಎಂದು ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments