Wednesday, May 13, 2026
Google search engine
Homeಕ್ರೀಡೆಸಂಜು ಗಳಿಸಿದ್ದು 101, ಮುಂಬೈ ವಿರುದ್ಧ ಸಿಎಸ್‌ ಕೆ ಗೆದ್ದಿದ್ದು ದಾಖಲೆಯ 103 ರನ್!

ಸಂಜು ಗಳಿಸಿದ್ದು 101, ಮುಂಬೈ ವಿರುದ್ಧ ಸಿಎಸ್‌ ಕೆ ಗೆದ್ದಿದ್ದು ದಾಖಲೆಯ 103 ರನ್!

ಆರಂಭಿಕ ಸಂಜು ಸ್ಯಾಮ್ಸನ್‌ ಗಳಿಸಿದ ಸತತ ಎರಡನೇ ಶತಕದ ಸಹಾಯಂದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 103 ರನ್‌ ಗಳ ಭಾರೀ ಅಂತರದಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಬಗ್ಗುಬಡಿದಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ 20 ಓವರ್‌ ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 207 ರನ್‌ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್‌ 19 ಓವರ್‌ ಗಳಲ್ಲಿ 104 ರನ್‌ ಗೆ ಆಲೌಟಾಯಿತು.

ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ನಲ್ಲಿ ರನ್‌ ಆಧಾರದ ಮೇಲೆ ಗಳಿಸಿದ ಅತೀ ದೊಡ್ಡ ಗೆಲುವಾಗಿದೆ. ಇದಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ವಿರುದ್ಧ 97 ರನ್‌ ಗಳಿಂದ ಗೆದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು.

ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್‌ ಗೆ ಅಖೀಲ್‌ ಹುಸೇನ್‌ 4 ವಿಕೆಟ್‌ ಪಡೆದು ಘಾಸಿ ಮಾಡಿದರು. ನೂರ್‌ ಅಹ್ಮದ್‌ 2 ವಿಕೆಟ್‌ ಪಡೆದರೆ ಉಳಿದವರು ತಲಾ 1 ವಿಕೆಟ್‌ ಪಡೆದು ಪ್ಲೇಆಸ್‌ ಆಸೆಯನ್ನು ಜೀವಂತವಾಗಿರಿಸಿದರು.

ಮುಂಬೈ ಪರ ಯಾವುದೇ ಒಬ್ಬ ಬ್ಯಾಟ್ಸ್‌ ಮನ್‌ ನೆಲಕಚ್ಚಿ ಆಡಲಿಲ್ಲ. 11 ರನ್‌ ಗೆ 3 ವಿಕೆಟ್‌ ಕಳೆದುಕೊಂಡ ತಂಡ ಸೋಲಿನ ಸೂಚನೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ (35) ಮತ್ತು ತಿಲಕ್‌ ವರ್ಮಾ (37) ನಾಲ್ಕನೇ ವಿಕೆಟ್‌ ಗೆ 73 ರನ್‌ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಆದರೆ ಇವರಿಬ್ಬರು ಔಟಾಗುತ್ತಿದ್ದಂತೆ ತಂಡ ನಾಟಕೀಯ ಕುಸಿತ ಅನುಭವಿಸಿತು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಕೂಡ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದರೂ ಆರಂಭಿಕ ಸಂಜು ಸ್ಯಾಮ್ಸನ್‌ ಶತಕ ಬಾರಿಸಿ ತಂಡವನ್ನು ಆಧರಿಸಿದರು. ಇದು ಸಂಜು ಸ್ಯಾಮ್ಸನ್‌ ಗೆ ಎರಡನೇ ಶತಕವಾಗಿದೆ. ಸಂಜು ೫೪ ಎಸೆತಗಳಲ್ಲಿ ೧೦ ಬೌಂಡರಿ ಮತ್ತು ೬ ಸಿಕ್ಸರ್‌ ನೆರವಿನೊಂದಿಗೆ ಶತಕ ಸಂಪಾದಿಸಿದ್ದೂ ಅಲ್ಲದೇ ಔಟಾಗದೇ ಉಳಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments