Wednesday, 28 October 2026 — Kannadavahini
BREAKING NEWS
ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ
ಅಪರಾಧ

ಮಹಿಳೆ ಮುಂದೆ ಪ್ಯಾಂಟ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಸೆಕ್ಯೂರೆಟಿ ಗಾರ್ಡ್‌ ಅರೆಸ್ಟ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 1 ವೀಕ್ಷಣೆಗಳು
security guard

ಬೆಂಗಳೂರು:ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿ ಅಸಭ್ಯ ವರ್ತನೆ ತೋರಿದ ಮಾರ್ಟ್​​ವೊಂದರ ಭದ್ರತಾ‌ ಸಿಬ್ಬಂದಿಯೊಬ್ಬ ನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಉಪನಗರದ ಮಾರ್ಟ್ ವೊಂದರ ಸೆಕ್ಯೂರಿಟಿ ಗಾರ್ಡ್ ಚಂದ್ರಹಾಸ್ ಬಂಧಿತ ಆರೋಪಿ. ಆರೋಪಿಯು ಪಕ್ಕದ ಅಂಗಡಿಯ ಮಹಿಳೆಯ ನಡುವೆ ಜಾಗದ ವಿಚಾರವಾಗಿ ಜಗಳ ತೆಗೆದಿದ್ದಾನೆ. ಈ ವೇಳೆ ಅಶ್ಲೀಲವಾಗಿ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ.

ದೂರು ನೀಡಿರುವ ಮಹಿಳೆ ಚಂದ್ರಹಾಸ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮಹಿಳೆಯ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.

ಮಹಿಳೆ ದೂರಿನ ಪ್ರಕಾರ, ತಾನು ನಂ 26/3, ಔಟರ್ ರಿಂಗ್ ರಸ್ತೆ, ಕೆಂಗೇರಿ ಉಪನಗರದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ವಾಸವಾಗಿದ್ದು, ಆಗಸ್ಟ್​ 2ರಂದು ಸುಮಾರು ರಾತ್ರಿ 9 ಗಂಟೆಗೆ ಫಿಶ್ ಅಂಗಡಿ ಜಾಗದ ವಿಚಾರಕ್ಕೆ ಮೆಗಾ ಮಾರ್ಟ್​ನ ಸೆಕ್ಯೂರಿಟಿ ಚಂದ್ರಹಾಸ ನನ್ನೊಂದಿಗೆ ಜಗಳ ಮಾಡಿದ್ದು, ಈ ವಿಷಯವಾಗಿ ಆತನಿಗೆ ಬುದ್ಧಿ ಹೇಳಿಸಲು ಮಾರ್ಟ್​​ನ ಮ್ಯಾನೇಜರ್​ಗೆ ದೂರು ಹೇಳಲು ಹೋದ ಸಂದರ್ಭದಲ್ಲಿ ಚಂದ್ರಹಾಸ ಏಕಏಕಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಸಾರ್ವಜನಿಕರ ಸಮ್ಮುಖದಲಿಯೇ ಆತನು ತನ್ನ ಪ್ಯಾಂಟ್ ಜಿಪ್ ಅನ್ನು ತೆಗೆದು ಮಾರ್ಮಾಂಗ ತೋರಿಸಲು ಮುಂದಾಗಿದ್ದು ಹಾಗೂ ನನ್ನ ಮೇಲೆ ಚೂಪಾದ ವಸ್ತುವಿನಿಂದ ಕಿವಿ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಗಾಯ ಮಾಡಿದ್ದು, ಅದೇ ಸಮಯದಲ್ಲಿ ಸಾರ್ವಜನಿಕರು 112 ಗೆ ಕರೆ ಮಾಡಿದಾಗ ಪೊಲೀಸರು ಬಂದು ಮುಂದಿನ ಅನಾಹುತವನ್ನು ತಪ್ಪಿಸಿರುತ್ತಾರೆ.

ನಂತರ ನನಗೆ ನೋವು ತಳಲಾರದೇ ವಿಕ್ಟೋರಿಯಾ ಅಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರು ನೀಡಿರುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿರುವ ಚಂದ್ರಹಾಸನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲೇಖಿಸಲಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8391 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment