ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ಕುಟುಂಬಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಮಾರಾಟದಿಂದ 450 ಕೋಟಿ ರೂ. ಲಭಿಸಿದೆ.
ಹೌದು, ಇದು ನಿಜ. ಶೇನ್ ವಾರ್ನ್ ನಿಧನರಾಗಿ ಹಲವು ವರ್ಷಗಳೇ ಕಳೆದಿವೆ. 2008ರಲ್ಲಿ ಐಪಿಎಲ್ ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಶೇನ್ ವಾರ್ನ್ ಅವರ ಕುಟುಂಬಕ್ಕೆ ಸುಮಾರು ೨೯ ವರ್ಷಗಳ ಬಳಿ ದೊಡ್ಡ ಮೊತ್ತ ಕೈಸೇರಿದೆ.
ರಾಜಸ್ಥಾನ್ ರಾಯಲ್ಸ್ ತಂಡ 1.63 ಶತಕೋಟಿ ಡಾಲರ್ ಅಂದರೆ 15,600 ಕೋಟಿ ರೂ.ಗೆ ಕಾಲ್ ಸೋಮಾನಿ ಖರೀದಿಸಿದೆ. ಈ ಖರೀದಿಯಿಂದ ಶೇನ್ ವಾರ್ನ್ ಕುಟುಂಬಕ್ಕೆ ಶೇ.0.75 ಪಾಲು ದೊರೆತಿದ್ದು, ಇದರ ಪ್ರಕಾರ ವಾರ್ನ್ ಕುಟುಂಬಕ್ಕೆ 450 ಕೋಟಿ ರೂ. ಮೊತ್ತ ತಲುಪಿದೆ.
2008ರಲ್ಲಿ ಶೇನ್ ವಾರ್ನ್ ಗೆ ನಾಯಕ ಕೇವಲ ನಾಯಕತ್ವ ಮಾತ್ರ ನೀಡಿರಲಿಲ್ಲ. ಜೊತೆಗೆ ತಂಡದಲ್ಲೂ ಪಾಲು ನೀಡಲಾಗಿತ್ತು. ಅವರು ತಂಡದ ನಾಯಕನಾಗಿ ಮಾತ್ರವಲ್ಲ, ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರಿಗೆ ನಾವು ನೀಡುವ ಕಿರು ಕಾಣಿಕೆ ಎಂದು ಅವರು ಹೇಳಿದರು.



