Wednesday, May 13, 2026
Google search engine
Homeಕ್ರೀಡೆಐಪಿಎಲ್‌ ಹರಾಜಿನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದ ಕ್ರಿಕೆಟಿಗ ಆರ್ಯಮಾನ್‌ ಈಗ ಆರ್‌ ಸಿಬಿ ಮಾಲೀಕ!

ಐಪಿಎಲ್‌ ಹರಾಜಿನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದ ಕ್ರಿಕೆಟಿಗ ಆರ್ಯಮಾನ್‌ ಈಗ ಆರ್‌ ಸಿಬಿ ಮಾಲೀಕ!

ಐಪಿಎಲ್‌ ಹರಾಜಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಆಡಿದ್ದ ಆರ್ಯಮಾನ್‌ ಬಿರ್ಲಾ ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನೂತನ ಮುಖ್ಯಸ್ಥರಾಗಿದ್ದಾರೆ.

ಆದಿತ್ಯಾ ಬಿರ್ಲಾ ಗ್ರೂಪ್‌ 1.78 ದಶಲಕ್ಷ ಡಾಲರ್‌ ಅಂದರೆ ಸುಮಾರು 16,700 ಕೋಟಿ ರೂ.ಗೆ ಅತೀ ಹೆಚ್ಚು ಅಭಿಮಾನಿಗಳ ಬಳಗ ಹೊಂದಿರುವ ಐಪಿಎಲ್‌ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಆರ್‌ ಸಿಬಿಯನ್ನು ಖರೀದಿಸಿತು.

ಆದಿತ್ಯಾ ಬಿರ್ಲಾ ಗ್ರೂಪ್‌, ಟೈಮ್ಸ್‌ ಗ್ರೂಪ್‌ ಹಾಗೂ ಅಮೆರಿಕದ ಕ್ರೀಡಾ ಸಂಸ್ಥೆ ಡೇವಿಡ್‌ ಬ್ಲಿಟ್ಜರ್‌ ನ ಬೋಲ್ಟ್‌ ವೆಂಚರ್ಸ್‌, ಅಮೆರಿಕ ಮೂಲದ ಬ್ಲಾಕ್‌ ಸ್ಟೋನ್‌ ಇನ್ವೆಸ್ಟ್‌ ಮೆಂಟ್‌ ಸಂಸ್ಥೆಗಳು ಜೊತೆಗೂಡಿ ಆರ್‌ ಸಿಬಿಯನ್ನು ಖರೀದಿಸಿದೆ.

ಆರ್‌ ಸಿಬಿಯನ್ನು ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಮೂಲ ಮಾಲೀಕರಾಗಿದ್ದು, ಇಂಗ್ಲೆಂಡ್‌ ಮೂಲದ ಡಿಯಾಗೊ ಪಬ್ಲಿಕ್‌ ಸಂಸ್ಥೆ ಆರ್‌ ಸಿಬಿಯ ಪುರುಷ ಮತ್ತು ಮಹಿಳಾ ತಂಡಗಳನ್ನು ಶೇ.100ರಷ್ಟು ಷೇರು ಹೊಂದಿತ್ತು. ಇದೀಗ ಖರೀದಿ ಒಪ್ಪಂದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರ್ಯಮಾನ್‌ ಬಿರ್ಲಾ ಆರ್‌ ಸಿಬಿಯ ನೂತನ ಚೇರ್‌ ಮನ್‌ ಆಗಿ ತಂಡಗಳನ್ನು ಮುನ್ನಡೆಸಲಿದ್ದಾರೆ.

ಆರ್ಯಮಾನ್‌ ಬಿರ್ಲಾ ಯಾರು?

ಆರ್ಯಮಾನ್‌ ಬಿರ್ಲಾ ಕುಮಾರ ಮಂಗಲಂ ಬಿರ್ಲಾ ಅವರ ಪುತ್ರ. 28 ವರ್ಷದ ಮಧ್ಯಪ್ರದೇಶ ದೇಶೀಯ ಕ್ರಿಕೆಟ್‌ ನಲ್ಲಿ ಆಡುತ್ತಿದ್ದ ಆರ್ಯಮಾನ್‌ ಬಿರ್ಲಾ ಆರ್‌ ಸಿಬಿ ತಂಡದ ರಜತ್‌ ಪಟಿದಾರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಜೊತೆ ರಣಜಿಯಲ್ಲಿ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಂಡಿದ್ದಾರೆ. ಆದಿತ್ಯ ಬಿರ್ಲಾ ೭ ಕೋಟಿ ರೂ.ಗೆ ಹರಾಜಿನಲ್ಲಿ ಮಾರಾಟವಾಗಿದ್ದರು.

ದೇಶೀಯ ಕ್ರಿಕೆಟ್‌ ನಲ್ಲಿ ಮಧ್ಯಪ್ರದೇಶ ಪರ ಆಡಿರುವ ಆರ್ಯಮನ್‌ ಬಿರ್ಲಾ, ಈಡನ್‌ ಗಾರ್ಡನ್‌ ನಲ್ಲಿ ಬಂಗಾಳ ಪರ ಶತಕ ಸೇರಿದಂತೆ ಒಟ್ಟಾರೆ 414ರನ್‌ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 34 ರನ್‌ ಬಾರಿಸಿದ್ದಾರೆ.
೨೦೧೮ರ ಐಪಿಎಲ್‌ ಹರಾಜಿನಲ್ಲಿ 30 ಲಕ್ಷ ರೂ.ಗಳಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಮಾರಾಟವಾಗಿದ್ದರು. ಆದರೆ ಒಂದೂ ಪಂದ್ಯ ಆಡಲು ಅವಕಾಶ ಸಿಗದೇ 2020ರಲ್ಲಿ ತಂಡದಿಂದ ಬಿಡುಗಡೆ ಮಾಡಲಾಗಿತ್ತು.

ಐಪಿಎಲ್‌ ನಲ್ಲಿ ಒಂದೂ ಪಂದ್ಯವಾಡದೇ ಹೊರಬಿದ್ದಿದ್ದಕ್ಕೆ ಬೇಸರಗೊಂಡ ಆರ್ಯಮಾನ್‌ ಕ್ರಿಕೆಟ್‌ ನಿಂದಲೇ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ ಆರ್‌ ಸಿಬಿ ತಂಡ ಖರೀದಿಸಿ ಮಾಲೀಕರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ನಾನು ಬಲೆಗೆ ಸಿಲುಕಿಕೊಂಡಿದ್ದೇನೆ ಎಂದು ಅನಿಸಿತು. ಇದರಿಂದ ಮಾನಸಿಕವಾಗಿ ತುಂಬಾ ನೊಂದಿದ್ದೆ. ಆದರೆ ಮಾನಸಿಕವಾಗಿ ಆರೋಗ್ಯ ಮುಖ್ಯ ಎಂಬ ಕಾರಣಕ್ಕೆ ನಾನು ದೂರ ಉಳಿದಿದ್ದೆ. ಇದೀಗ ಆರ್‌ ಸಿಬಿ ಅಂತಹ ತಂಡ ಖರೀದಿಸಿರುವುದಕ್ಕೆ ಸಂತಸವಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments