Wednesday, May 13, 2026
Google search engine
Homeಕ್ರೀಡೆ16,700 ಕೋಟಿ ದಾಖಲೆ ಮೊತ್ತಕ್ಕೆ ಬಿರ್ಲಾ ಪಾಲಾದ ಆರ್ ಸಿಬಿ!

16,700 ಕೋಟಿ ದಾಖಲೆ ಮೊತ್ತಕ್ಕೆ ಬಿರ್ಲಾ ಪಾಲಾದ ಆರ್ ಸಿಬಿ!

ಬೆಂಗಳೂರು: ಐಪಿಎಲ್ ನ ಅತೀ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16,700 ಕೋಟಿ ರೂ. ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಬಿಡ್ ಸಲ್ಲಿಸಿದ್ದ ಕುಮಾರ ಮಂಗಲಂ ಅವರ ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ಗೌರವಕ್ಕೆ ಆರ್ ಸಿಬಿ ಪಾತ್ರವಾಗಿದೆ.

ಆರ್ ಸಿಬಿ 2 ಬಿಲಿಯನ್ ಡಾಲರ್ ಮೊತ್ತಕ್ಕೆ ಪಟ್ಟು ಹಿಡಿದಿತ್ತು. ಆದರೆ ಅಂತಿಮವಾಗಿ 1.78 ಬಿಲಿಯನ್ ಡಾಲರ್ ಗೆ ಸಹಮತಿಸಿದ್ದು, ಬಿರ್ಲಾ ಜೊತೆ ಒಡಂಬಂಡಿಕೆಗೆ ಸಹಿ ಹಾಕಿದೆ.

ಐಪಿಎಲ್ ಖರೀದಿಗೆ ಪೂನಾವಾಲಾ ಸೇರಿದಂತೆ ಹಲವು ಕಂಪನಿಗಳು ಆಸಕ್ತಿ ತೋರಿದ್ದವು. ಆದರೆ ಬಿಡ್ ಮೊತ್ತ ದೊಡ್ಡದಾಗಿ ಇದ್ದಿದ್ದರಿಂದ ಹಿಂದೆ ಸರಿದವು. ಎರಡು ದಿನಗಳ ಹಿಂದೆಯಷ್ಟೇ ಅಖಾಡಕ್ಕೆ ಇಳಿದ ಆದಿತ್ಯಾ ಬಿರ್ಲಾ ಕಂಪನಿ ಆರ್ ಸಿಬಿ ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಮಾರ್ಚ್ 31ರಂದು ಫ್ರಾಂಚೈಸಿ ಮಾರಾಟಕ್ಕೆ ಕೊನೆಯ ದಿನವಾಗಿತ್ತು. ಇದೀಗ ಆರ್ ಸಿಬಿ ಬಿರ್ಲಾ ಪಾಲಾಗಿದ್ದು, ಕುಮಾರ ಮಂಗಲಂ ಒಡೆತನದ ಬಿರ್ಲಾ ಜೊತೆ ಟೈಮ್ಸ್ ಗ್ರೂಪ್, ಅಮೆರಿಕದ ಕ್ರಿಡಾ ದೈತ್ಯ ಸಂಸ್ಥೆ ಡೇವಿಡ್ ಬ್ಲಿಟ್ಜೆರ್ ನ ಬೋಲ್ಟ್ ವೆಂಚರ್ಸ್ ಕೈ ಜೋಡಿಸಿವೆ.

ಆರ್ ಸಿಬಿ ತಂಡ ಚೊಚ್ಚಲ ಪ್ರಶಸ್ತಿ ಗೆದ್ದ ನಂತರ ಮಾರಾಟವಾಗಿದ್ದು, ಮಾರ್ಚ್ 28ರಂದು ಪಪ್ರಸಕ್ತ ಸಾಲಿನ ಐಪಿಎಲ್ ಟಿ-20 ಟೂರ್ನಿ ಆರಂಭವಾಗಲಿದೆ. ಮಂಗಳವಾರ ಆರ್ ಸಿಬಿ ಉದ್ಘಾಟನಾ ಪಂದ್ಯದ ಟಿಕೆಟ್ ಗಳ ಮಾರಾಟ ಆನ್ ಲೈನ್ ನಲ್ಲಿ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸೋಲ್ಡ್ ಔಟ್ ಆಗಿದೆ.

ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ 1.63 ಬಿಲಿಯನ್ ಡಾಲರ್ (15.290 ಕೋಟಿ ರೂ.)ಗೆ ಸೊಮಾನಿ ರಾಬ್ ವಾಲ್ಟನ್ ಮತ್ತು ವಾಲ್ಮಾರ್ಟ್ ಫ್ಯಾಮಿಲಿ ಖರೀದಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments