Thursday, May 14, 2026
Google search engine
Homeಅಪರಾಧಮದುವೆ ಆಗಿ 25 ವರರನ್ನು ವಂಚಿಸಿದ ಕಳ್ಳಿ ವಧು; ಕಳ್ಳಿ ಹಿಡಿಯಲು ವರನಾದ ಪೊಲೀಸ್!

ಮದುವೆ ಆಗಿ 25 ವರರನ್ನು ವಂಚಿಸಿದ ಕಳ್ಳಿ ವಧು; ಕಳ್ಳಿ ಹಿಡಿಯಲು ವರನಾದ ಪೊಲೀಸ್!

ಮದುವೆ ಆದ ನಂತರ ವರನ ಮನೆಯಿಂದ ಚಿನ್ನಾಭರಣ ದೋಚಿ ಪರಾರಿ ಆಗುತತಿದ್ದ ದರೋಡೆ ವಧು ಹಾಗೂ ಕಳ್ಳಿ ವಧು ಎಂದೇ ಕುಖ್ಯಾತಿ ಪಡೆದಿದ್ದ ಮಹಿಳೆಯನ್ನು ಮಧ್ಯಪ್ರದೇಶದ ಭೂಪಾಲ್ ನಲ್ಲಿ ಬಂಧಿಸಲಾಗಿದೆ.

ಅನುರಾಧ ಪಾಸ್ವಾನ್ ಹೆಸರಿನ ಉತ್ತರ ಪ್ರದೇಶ ಮೂಲದ ಈ ಮಹಿಳೆ ಮದುವೆ ನಾಟಕ ಮಾಡಲು ಪ್ರತಿಬಾರಿ ಹೊಸ ನಗರ, ಹೊಸ ಹೆಸರು ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಇದರಿಂದ ಈಕೆಯನ್ನು ಬಂಧಿಸಲು ಪೊಲೀಸರಿಗೆ ಸುಳಿವು ಸಿಗುತ್ತಿರಲಿಲ್ಲ.

ಅಂತಿಮವಾಗಿ ಸವಾಯ್ ಮಧೋಪುರ್ ಪೊಲೀಸ್ ಠಾಣೆ ಸಿಬ್ಬಂದಿ ಮಿಸ್ಟರ್ ಪಾಸ್ವನ್ ಎಂಬ ನಕಲಿ ವರನನ್ನು ಸೃಷ್ಟಿಸಿ ದರೋಡೆ ವಧುವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿರುದ್ಯೋಗಿ ಸೋದರ, ಕಷ್ಟ ಹಾಗೂ ಅಸಹಾಯಕ ಸ್ಥಿತಿಯಲ್ಲಿದ್ದ ಅನುರಾಧ ಪಾಸ್ವಾನ್ ಮದುವೆ ಆಗಲು ಹಣ ಇರಲಿಲ್ಲ. 32 ವರ್ಷವಾದರೂ ಮದುವೆ ಆಗಲಿಲ್ಲ ಎಂಬ ಕಾರಣಕ್ಕೆ ಮದುವೆ ಆಗಲು ನಿರ್ಧಸಿದಳು. ಅಲ್ಲದೇ ಹಣಕಾಸಿನ ಸಮಸ್ಯೆ ಬಗೆಹರಿಸಿಕೊಳ್ಳಲು ಮದುವೆಯನ್ನೇ ಬಂಡವಾಳ ಮಾಡಿಕೊಂಡು ಸಂಪಾದಿಸಲು ಆರಂಭಿಸಿದಳು.

ನಕಲಿ ಮದುವೆ ಗ್ಯಾಂಗ್ ರೂಪಿಸಿದ ಈಕೆ ಸಂಗಡಿಗರ ನೆರವಿನಿಂದ ನಕಲಿ ಫೋಟೊ, ಹೆಸರು, ವಿಳಾಸ ಎಲ್ಲಾ ತೋರಿಸಿ ಮದುವೆ ಬ್ರೋಕರ್ ಆಗಿ ಹೆಣ್ಣು ತೋರಿಸಿದರೆ 2 ಲಕ್ಷ ರೂ. ಕಮಿಷನ್ ಕೊಡುವಂತೆ ಬೇಡಿಕೆ ಇಡುತ್ತಿದ್ದರು.

ಮದುವೆ ಮಾತುಕತೆ ಮುಗಿಯುತ್ತಿದ್ದಂತೆ ಮನೆಯಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ಮುಗಿಸುತ್ತಿದ್ದರು. ಒಳ್ಳೆಯ ಹುಡುಗಿಯಂತೆ ನಟಿಸುತ್ತಿದ್ದ ಅನುರಾಧ ಮನೆಯ ಪ್ರತಿಯೊಬ್ಬರ ಸದಸ್ಯರ ವಿಶ್ವಾಸವನ್ನು ಬೇಗನೆ ಸಂಪಾದಿಸುತ್ತಿದ್ದಳು.

ಸಮಯ ನೋಡಿ ಮನೆಯ ಎಲ್ಲಾ ಸದಸ್ಯರಿಗೆ ಊಟದಲ್ಲಿ ನಿದ್ದೆ ಮಾತ್ರ ಹಾಕಿ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿ ಪರಾರಿಯಾಗುತ್ತಿದ್ದಳು.

ಸವಾಯ್ ಮಧೋಪುರ್ ನಿವಾಸಿ ವಿಷ್ಣು ಯಾದವ್ ಮದುವೆ ಆಗಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ. ಬ್ರೋಕರ್ ಗಳಿಗೆ 2 ಲಕ್ಷ ರೂ. ನೀಡಿ ಮದುವೆ ಆಗಿದ್ದ. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಅನುರಾಧ 125 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ರೂ. ನಗದು ಮತ್ತು 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ವಿಷ್ಣು ಪೊಲೀಸರಿಗೆ ದೂರು ನೀಡಿದ್ದ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments