Wednesday, June 24, 2026
Google search engine
Homeಕ್ರೀಡೆಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರಸ್ಥಾನದಿಂದ ಜಾರಿಗೆ ಸ್ಮೃತಿ, ಜಿಗಿದ ಜೆಮಿಹಾ

ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರಸ್ಥಾನದಿಂದ ಜಾರಿಗೆ ಸ್ಮೃತಿ, ಜಿಗಿದ ಜೆಮಿಹಾ

ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡ ಇತಿಹಾಸ ಬರೆದರೂ ಐಸಿಸಿ ಏಕದಿನ ಮಹಿಳಾ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಮೃತಿ ಮಂದಾನ ಅಗ್ರಸ್ಥಾನದಿಂದ ಕುಸಿದಿದ್ದಾರೆ.

ಮುಂಬೈನಲ್ಲಿ ಭಾನುವಾರ ನಡೆದ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ 52 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿತು.

ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದ್ದ ಸ್ಮೃತಿ ಮಂದಾನ ಎರಡನೇ ಸ್ಥಾನಕ್ಕೆ ಕುಸಿದರೆ, ಸೆಮಿಫೈನಲ್ ಮತ್ತು ಫೈನಲ್ ನಲ್ಲಿ ಶತಕ ಸಿಡಿಸಿದ್ದ ದಕ್ಷಿಣ ಆಫ್ರಿಕಾದ ಲೌರಾ ವೊಲ್ವಾರ್ಡ್ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ.

ಲೌರಾ ಮಹತ್ವದ ಹಂತದಲ್ಲಿ ಶತಕ ಸಿಡಿಸಿದ್ದೂ ಅಲ್ಲದೇ ಟೂರ್ನಿಯಲ್ಲಿ ಗರಿಷ್ಠ 571 ರನ್ ಸಂಪಾದಿಸಿದ್ದರು. ಲೌರಾ ಏಕಾಂಗಿ ಹೋರಾಟದಿಂದ ಮೊದಲ ಬಾರಿ ಫೈನಲ್ ತಲುಪಿದ್ದ ಹರಿಣಗಳ ತಂಡ ಫೈನಲ್ ನಲ್ಲಿ ಮುಗ್ಗರಿಸಿತ್ತು. ಸ್ಮೃತಿ ಮಂದಾನ ರೇಟಿಂಗ್ 811ಕ್ಕೆ ಕುಸಿದರೆ ಲೌರಾ ಜೀವನಶ್ರೇಷ್ಠ 814 ಅಂಕ ಸಂಪಾದಿಸಿದರು.

ಸ್ಮೃತಿ ಮಂದಾನ ಎರಡನೇ ಸ್ಥಾನಕ್ಕೆ ಕುಸಿದರೂ ಭಾರತ ತಂಡದ ಹಲವು ಆಟಗಾರ್ತಿಯರು ರ್ಯಾಂಕಿಂಗ್ ನಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಅದರಲ್ಲೂ ಸೆಮಿಫೈನಲ್ ನಲ್ಲಿ ಶತಕ ಸಿಡಿಸಿ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟ ಜೆಮಿಹಾ ರೋಡ್ರಿಗಜ್ ಇದೇ ಮೊದಲ ಬಾರಿಗೆ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದೂ ಅಲ್ಲದೇ 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ದೀಪ್ತಿ ಶರ್ಮ ಆಲ್ ರೌಂಡರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments