Sunday, May 18, 2025
Google search engine
Homeಕ್ರೀಡೆಟಿ-20ಯಲ್ಲಿ 11 ಬೌಲರ್ ಗಳನ್ನು ಬಳಸಿ ದಾಖಲೆ ಬರೆದ ದೆಹಲಿ!

ಟಿ-20ಯಲ್ಲಿ 11 ಬೌಲರ್ ಗಳನ್ನು ಬಳಸಿ ದಾಖಲೆ ಬರೆದ ದೆಹಲಿ!

ದೆಹಲಿ ತಂಡ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಪಂದ್ಯದಲ್ಲಿ ಮಣಿಪುರದ ವಿರುದ್ಧ ಎಲ್ಲಾ 11 ಆಟಗಾರರಿಂದ ಬೌಲಿಂಗ್ ಮಾಡಿಸಿ ಹೊಸ ದಾಖಲೆ ಬರೆದಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ತಂಡದ ಎಲ್ಲಾ 11 ಆಟಗಾರರನ್ನು ಬೌಲಿಂಗ್ ಗೆ ಇಳಿಸಿದ ಮೊದಲ ತಂಡ ಎಂಬ ದಾಖಲೆಗೆ ದೆಹಲಿ ಪಾತ್ರವಾಯಿತು.

ದೆಹಲಿ ತಂಡದ ನಾಯಕ ಆಯುಷ್ ಬದಾನಿ ಸ್ವತಃ ಬೌಲಿಂಗ್ ಮಾಡಿದ್ದೂ ಅಲ್ಲದೇ 1 ವಿಕೆಟ್ ಪಡೆದು ಗಮನ ಸೆಳೆದರು.  ದೆಹಲಿ ತಂಡ 4 ವಿಕೆಟ್ ಗಳಿಂದ ಈ ಪಂದ್ಯವನ್ನು ಗೆದ್ದು ಅಜೇಯರಾಗಿ ಉಳಿದಿದ್ದೂ ಅಲ್ಲದೇ 16 ಅಂಕದೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮಣಿಪುರ ತಂಡ 8 ವಿಕೆಟ್ ಕಳೆದುಕೊಂಡು 120 ರನ್ ಕಲೆಹಾಕಿತು. ಸುಲಭ ಗುರಿ ಬೆಂಬತ್ತಿದ ದೆಹಲಿ ತಂಡ 6 ವಿಕೆಟ್ ಕಳೆದುಕೊಂಡು ಸುಲಭ ಗೆಲುವು ದಾಖಲಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments